CONNECT WITH US  

ಪಾಕ್‌ ಗುಂಡಿನ ದಾಳಿಗೆ ಬಿಎಸ್‌ಎಫ್ ಯೋಧ ಹುತಾತ್ಮ 

ಶ್ರೀನಗರ: ಪಾಕ್‌ ಪಡೆಗಳು ಶುಕ್ರವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘನೆ ಮಾಡಿ ಅರ್ನಿಯಾ ಅಂತರಾಷ್ಟ್ರೀಯ ಗಡಿ ರೇಖೆಯ ಆರ್‌ಎಸ್‌ ಪುರಾ ಸೆಕ್ಟರ್‌ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಓರ್ವ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾನೆ . ಇದು ಪಾಕ್‌ ಕಳೆದ 5 ದಿನಗಳಲ್ಲಿ ನಡೆಸಿದ 6 ನೇ ಕದನ ವಿರಾಮ ಉಲ್ಲಂಘನೆಯಾಗಿದೆ.

ಹುತಾತ್ಮರಾದ ಯೋಧ ಬಿಜೇಂದ್ರ ಬಹದೂರ್‌ ಎಂದು ತಿಳಿದು ಬಂದಿದೆ. ಪಾಕ್‌ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ಬಿಎಸ್‌ಎಫ್ ನೀಡಿದ್ದು ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ದಾಳಿಯ ಬಳಿಕ ಅರ್ನಿಯಾ ಪ್ರದೇಶದಲ್ಲಿ ನಾಗರಿಕರು ತೀವ್ರ ಭಯ ಭೀತರಾಗಿದ್ದಾರೆ.

ಹೆಚ್ಚುವರಿ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಯಾವುದೇ ದಾಳಿ ಗೆ ಪ್ರತ್ಯುತ್ತರ ನೀಡಲು ಸೇನೆ ಸಿದ್ದವಾಗಿದೆ ಎಂದು ನಾಗರಿಕರಿಗೆ ಸುರಕ್ಷತೆಯ ಭರವಸೆ ನೀಡಲಾಗಿದೆ. 

Trending videos

Back to Top