ಬೀದಿ ನಾಯಿಗಳನ್ನು ಜೀವಂತ ಸುಟ್ಟ ದುಷ್ಕರ್ಮಿಗಳು
Team Udayavani, Oct 5, 2017, 12:28 PM IST
ಪುಣೆ : ಇನ್ನೊಂದು ಆಘಾತಕಾರಿ ಮತ್ತು ಅಮಾನುಷ ಪ್ರಾಣಿ ಹಿಂಸೆ ದುಷ್ಕೃತ್ಯದ ಪ್ರಕರಣವೊಂದರಲ್ಲಿ ನಾಲ್ಕು ಬೀದಿ ನಾಯಿಗಳನ್ನು ಹಗ್ಗದಿಂದ ಬಿಗಿದು, ರಸ್ತೆಯಲ್ಲಿ ಅವುಗಳನ್ನು ದರದರನೆ ಎಳೆದೊಯ್ದು ಜೀವಂತ ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ನಾಯಿಗಳ ಅರೆಸುಟ್ಟ ದೇಹದ ಕೊಳೆತ ಭಾಗಗಳು ಮತ್ತು ಅಸ್ಥಿಪಂಜರಗಳು ಸಮೀಪದ ಪೊದೆಗಳಲ್ಲಿ ಕಂಡು ಬಂದಿರುವುದಾಗಿ ವರದಿಗಳು ತಿಳಿಸಿವೆ. ನಾಯಿಗಳಿಗೆ ಮೊದಲು ವಿಷ ಉಣಿಸಿ ಬಳಿಕ ಅವುಗಳನ್ನು ದಾರುಣವಾಗಿ ಮತ್ತು ಅಮಾನುಷವಾಗಿ ಸುಟ್ಟು ಕೊಲ್ಲಲಾಗಿರುವುದು ಅವಶೇಷಗಳಿಂದ ಗೊತ್ತಾಗಿದೆ.
ಈ ದುಷ್ಕೃತ್ಯದ ಬಗ್ಗೆ ಅನಾಮಿಕ ಕರೆ ಪಡೆದ ಎನ್ಜಿಓ ಸದಸ್ಯೆ ನೀನಾ ರಾಯ್ ಎಂಬವರು ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಪೊದೆಯಡಿ ಅರೆ ಸುಟ್ಟ ನಾಯಿಗಳ ಅವಶೇಷಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದವು. ಸುಟ್ಟು ಕೊಲ್ಲಲಾಗಿರುವ ನಾಯಿಗಳು ಸಂಖ್ಯೆ ನಾಲ್ಕಕ್ಕಿಂತ ಹೆಚ್ಚಿರಬಹುದೆಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ