ಉತ್ತರ ಕೊರಿಯಾ ಗಡಿಯಲ್ಲಿ ಅಮೆರಿಕ ಬಾಂಬರ್ ವಿಮಾನ
Team Udayavani, Oct 12, 2017, 7:50 AM IST
ನ್ಯೂಯಾರ್ಕ್: ಉತ್ತರ ಕೊರಿಯಾ ಹಾಗೂ ಅಮೆರಿಕ ಮಧ್ಯದ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದಂತೆಯೇ, ಉತ್ತರ ಕೊರಿಯಾವನ್ನು ಎದುರಿಸುವ ತಂತ್ರಗಳ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ಅಮೆರಿಕದ ಎದುರಿರುವ ಎಲ್ಲ ಸಾಧ್ಯತೆಗಳ ಬಗ್ಗೆ ರಕ್ಷಣಾ ಇಲಾಖೆ ವಿವರಣೆ ನೀಡಿದೆ. ಶಾಂತಿಯುತ ಕ್ರಮಗಳ ಜತೆಗೆ ಕಠಿನ ಕ್ರಮಗಳ ಸಾಧ್ಯತೆಯನ್ನೂ ವಿವರಿಸಲಾಗಿದೆ ಎಂದು ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಹೇಳಿದ್ದಾರೆ. ಇನ್ನೊಂದೆಡೆ ಉತ್ತರ ಕೊರಿಯಾ ಗಡಿ ಭಾಗದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಪ್ರಾಯೋಗಿಕ ಹಾರಾಟ ನಡೆಸಿವೆ. ಜತೆಗೆ ದಕ್ಷಿಣ ಕೊರಿಯಾದ ಎಫ್ 15 ಯುದ್ಧ ವಿಮಾನಗಳೂ ಜತೆಗೂಡಿವೆ. ಗಡಿಯ ಅತಿ ಸಮೀಪ ಯುದ್ಧವಿಮಾನಗಳು ಹಾರಾಡಿದರೂ ಹೊಡೆದುರುಳಿಸಲಾಗುತ್ತದೆ ಎಂದು ಅಮೆರಿಕಕ್ಕೆ ಈ ಹಿಂದೆ ಉತ್ತರಕೊರಿಯಾ ಎಚ್ಚರಿಕೆ ನೀಡಿತ್ತು. ಇಷ್ಟಾದರೂ ಗಡಿಯಲ್ಲಿ ವೈಮಾನಿಕ ತರಬೇತಿ ನಡೆಸುತ್ತಿರುವುದು ಯುದ್ಧ ಭೀತಿ ಹೆಚ್ಚಲು ಕಾರಣವಾಗಿದೆ.
ಇದೇ ವೇಳೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಯುದ್ಧ ಕಾಲದ ಯೋಜನೆ ಗಳನ್ನು ಉತ್ತರ ಕೊರಿಯಾ ಕದ್ದಿದೆ ಎಂದು ಹೇಳಲಾಗಿದೆ. ಉತ್ತರ ಕೊರಿಯಾಗೆ ಯುದ್ಧ ಯೋಜನೆಗಳಿರುವ ಸುಮಾರು 235 ಗಿಗಾಬೈಟ್ನಷ್ಟು ದತ್ತಾಂಶವು ಲಭ್ಯವಾಗಿರುವುದಾಗಿ ದಕ್ಷಿಣ ಕೊರಿಯಾದ ಸಂಸದ ರೀ ಚಿಯೂಲ್ ಹೀ ಈ ಹೇಳಿದ್ದಾರೆ. ಇದರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿಯನ್ನು ಹೊಡೆದುರುಳಿಸುವ ಯೋಜನೆಗಳೂ ಇವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ