CONNECT WITH US  

ಮಧ್ಯಪ್ರದೇಶದ 16 ಲಕ್ಷ ರೈತರಿಗೆ ಭಾವಾಂತರ್‌ ಯೋಜನೆ ಲಾಭ

ಭೋಪಾಲ್‌ : ರೈತರ ಉತ್ಪನ್ನಗಳಿಗೆ  ಮಾದರಿ ಬೆಲೆಯನ್ನು ನಿಗದಿಸಿ ಆ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡುವ ಮಧ್ಯಪ್ರದೇಶದ "ಭಾವಾಂತರ್‌' ಯೋಜನೆ'ಯ ಲಾಭವನ್ನು ಮಧ್ಯಪ್ರದೇಶದ 16 ಲಕ್ಷಕ್ಕೂ ಅಧಿಕ ರೈತರು ಪಡೆಯಲಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. 

ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆಯನ್ನು ನಿಗದಿಸಿ ಆ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ಮಧ್ಯಪ್ರದೇಶ ಸರಕಾರದ ಯೋಜನೆಗೆ "ಭಾವಾಂತರ್‌' ಎಂದು ಹೆಸರಿಡಲಾಗಿದೆ. 

ಈ ಯೋಜನೆಯಡಿ ಸರಕಾರ ನಿಗದಿಸುವ ಮಾರುಕಟ್ಟೆ ಧಾರಣೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ಅಂತರವನ್ನು "ಮಾದರಿ ಬೆಲೆ' ಎಂದು ಕರೆಯಲಾಗುತ್ತದೆ. ಇದನ್ನು ಸರಕಾರವು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತದೆ.

ಹದಿನಾರು ಲಕ್ಷಕ್ಕೂ ಅಧಿಕ ರೈತರು ಈಗಾಗಲೇ ಈ "ಭಾವಾಂತರ್‌' ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಈ ವಿಶಿಷ್ಟ ಯೋಜನೆಯನ್ನು ಮಧ್ಯಪ್ರದೇಶ ಸರಕಾರ ಜಾರಿ ಮಾಡುತ್ತಿದೆ. 

ಡಿ.31ರಂದು ಸ್ಥಳೀಯ ಮಾರುಕಟ್ಟೆಗಳಲ್ಲಿ (ಮಂಡಿಗಳಲ್ಲಿ) ಮಾರಾಟ ಕಿಂಡಿ ಮುಚ್ಚಲ್ಪಟ್ಟಾಗ ಸರಕಾರ ಅಂದೇ ಮಾದರಿ ಬೆಲೆಯನ್ನು ಘೋಷಿಸುತ್ತದೆ ಎಂದು ಅಧಿಕಾರಿ ತಿಳಿಸಿವೆ. 

Trending videos

Back to Top