CONNECT WITH US  

ದೀಪಿಕಾ ತಲೆಗೆ ಬಹುಮಾನ ಘೋಷಿಸಿದ್ದ ಬಿಜೆಪಿ ನಾಯಕ ಸೂರಜ್‌ ರಾಜೀನಾಮೆ

ಚಂಡೀಗಢ: ವಿವಾದಾತ್ಮಕ ಸಿನಿಮಾ "ಪದ್ಮಾವತಿ'ಯ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದ ಬಿಜೆಪಿ ನಾಯಕ ಸೂರಜ್‌ ಪಾಲ್‌ ಅಮು ಬುಧವಾರ ರಾಜೀನಾಮೆ ನೀಡಿದ್ದಾರೆ.

ಹರ್ಯಾಣ ಬಿಜೆಪಿ ಘಟಕದ ಮುಖ್ಯ ಮಾಧ್ಯಮ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಮಂಗಳವಾರ ಕರ್ಣಿ ಸೇನಾ ಪ್ರತಿನಿಧಿಗಳು ಕರೆದಿದ್ದ ಸಭೆಗೆ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಗೈರಾಗಿದ್ದರಿಂದ ಬೇಸರಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ವಿವಾದಿತ ಹೇಳಿಕೆ ಸಂಬಂಧ ವಿವರಣೆ ನೀಡುವಂತೆ ಇತ್ತೀಚೆಗಷ್ಟೇ ಸೂರಜ್‌ ಪಾಲ್‌ಗೆ ಬಿಜೆಪಿ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

3ಡಿ ಆವೃತ್ತಿಗೆ ಅರ್ಜಿ: ಇನ್ನೊಂದೆಡೆ, ಪದ್ಮಾವತಿ ಸಿನಿಮಾದ 3ಡಿ ಆವೃತ್ತಿಗೆ ಅನುಮತಿ ಕೋರಿ ಚಿತ್ರತಂಡ ಬುಧವಾರ ಸಿಬಿಎಫ್ಸಿಗೆ ಹೊಸ ಅರ್ಜಿ ಸಲ್ಲಿಸಿದೆ. ಈ ಹಿಂದೆ 2ಡಿ ಆವೃತ್ತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, 3ಡಿ ಬಗ್ಗೆ ಜನರಿಂದ ಹೆಚ್ಚಿನ ಒಲವು ವ್ಯಕ್ತವಾದ ಕಾರಣ, ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ವಿಯಾಕಾಮ್‌ 18 ಹೇಳಿದೆ.

ಘೂಮರ್‌ಗೆ ಮುಲಾಯಂ ಸೊಸೆ ಹೆಜ್ಜೆ
ವಿವಾದಾತ್ಮಕ ಪದ್ಮಾವತಿ ಸಿನಿಮಾದ ಘೂಮರ್‌ ಹಾಡಿಗೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ ಹೆಜ್ಜೆ ಹಾಕು ತ್ತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ಸಾರ್ವ ಜನಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಅಪರ್ಣಾ ನೃತ್ಯ ಮಾಡಿದ್ದಾರೆ. ಕಳೆದ ವಾರವಷ್ಟೇ ಉತ್ತರ ಪ್ರದೇ ಶದ ದೇವಾಸ್‌ ಜಿಲ್ಲೆಯ ಶಿಕ್ಷಣಾಧಿಕಾರಿಯೊಬ್ಬರು, ಶಾಲೆಯಲ್ಲಿ ಮಕ್ಕಳು ಘೂಮರ್‌ ಹಾಡಿಗೆ ನೃತ್ಯ ಮಾಡು ವುದನ್ನು ನಿಷೇ ಧಿಸಿ ಸುತ್ತೋಲೆ ಹೊರಡಿಸಿದ್ದು ಸುದ್ದಿಯಾಗಿತ್ತು.


Trending videos

Back to Top