2018ರಲ್ಲಿ ಉತ್ತಮ ವೇತನ: ಶೇ.10-15ರಷ್ಟು ಹೆಚ್ಚಾಗಲಿದೆ ಸಂಬಳ
Team Udayavani, Dec 11, 2017, 6:15 AM IST
ನವದೆಹಲಿ: ಮುಂದಿನ ವರ್ಷ ಉತ್ತಮ ವೇತನ ಸಿಗಲಿ ಎಂದು ಬಯಸುವವರಿಗೆ ಸಂತಸ ತರಬಲ್ಲ ಮಾಹಿತಿ ಇದು. ಇನ್ನೇನು 20 ದಿನಗಳಲ್ಲಿ 2017ನೇ ವರ್ಷ ಮುಕ್ತಾಯ ವಾಗಲಿದೆ. 2018ರಲ್ಲಿ ಉತ್ತಮ ಪ್ರತಿಭೆ ಹೊಂದಿದವರಿಗೆ ಶೇ.10-15 ರಷ್ಟು ವೇತನ ಪರಿಷ್ಕರಣೆ ಯಾಗಲಿದೆ. ನೋಟು ಅಮಾನ್ಯ, ಕೆಲವು ಕಂಪನಿಗಳಲ್ಲಿ ಉದ್ಯೋಗ ಕಡಿತ ಮೊದಲಾದ ಬೆಳವಣಿಗೆಗಳಿಂದ ಕಂಗೆಟ್ಟ ನೇಮಕ ಕ್ಷೇತ್ರಕ್ಕೆ ಇದು ಚೇತೋಹಾರಿಯಾಗಿ ಪರಿಣಮಿಸಲಿದೆ. ಆದರೂ, ಕೆಲವೊಂದು ಹಂತಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಎಂದು ಕಂಡು ಬರುವಲ್ಲಿ ಉದ್ಯೋಗ ಕಡಿತ ನಡೆಯುವ ಸಾಧ್ಯತೆಯೂ ಇದೆ.
ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯೊಂದು ಈ ಅಭಿಪ್ರಾಯವನ್ನು ಹೊರಹಾಕಿದೆ. ಅದರ ಪ್ರಕಾರ ಹಾಲಿ ವರ್ಷದ ಮೊದಲ ಮೂರು ತ್ತೈಮಾಸಿಕಗಳಲ್ಲಿ ನೇಮಕ ನಡೆಸಲು ಕಂಪನಿಗಳು ಹಿಂದೇಟು ಹಾಕಿದ್ದವು. ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಮತ್ತೆ ನೇಮಕ ನಡೆಸಿಕೊಳ್ಳುವತ್ತ ಆಸಕ್ತಿ ತೋರಿವೆ. ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಶೇ.22, ಏಪ್ರಿಲ್-ಜೂನ್ ಅವಧಿಯಲ್ಲಿ ಶೇ.19, ಏಪ್ರಿಲ್-ಜೂನ್ ಅವಧಿಯಲ್ಲಿ ಶೇ.16ಕ್ಕೆ ಇಳಿಕೆ ಯಾಗಿದ್ದರೆ, ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.24ಕ್ಕೆ ನೇಮಕ ಪ್ರಮಾಣ ಏರಿಕೆಯಾಗಿದೆ.
2018ನೇ ಸಾಲಿನಲ್ಲಿ ನೇಮಕ ಪ್ರಕ್ರಿಯೆ, ಉದ್ಯೋಗ ನೀಡಿಕೆ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಜತೆಗೆ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಚೇತರಿಕೆ ಕಂಡು ಬರಲಿದೆ. ಚಿಲ್ಲರೆ, ಹಣಕಾಸು ಸೇವಾ ಕ್ಷೇತ್ರಗಳಲ್ಲಿಯೂ ಪ್ರೋತ್ಸಾಹದಾಯಕ ವಾತಾವರಣ ಇರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದರ ಜತೆಗೆ ಹೊಸ ರೀತಿಯಲ್ಲಿ ಕೆಲಸ ಮಾಡುವಂಥ ಹೊಸ ಐಡಿಯಾಗಳು ಕೂಡ ಕಂಡು ಬರಲಿವೆ ಎಂದು ಅದರಲ್ಲಿ ಕಂಡುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್