CONNECT WITH US  

ಮತಯಂತ್ರ ತಿರುಚಿ ಗೆದ್ದ ಬಿಜೆಪಿಗೆ ಅಭಿನಂದನೆ: ಹಾರ್ದಿಕ್‌ ಪಟೇಲ್‌

ಹೊಸದಿಲ್ಲಿ : ''ಎಟಿಎಂ ಯಂತ್ರಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂದಾದರೆ ಮತಯಂತ್ರಗಳನ್ನು ಕೂಡ ಹ್ಯಾಕ್‌ ಮಾಡಲು ಸಾಧ್ಯ'' ಎಂದಿರುವ ಪಾಟಿದಾರ್‌ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌, "ಮತಯಂತ್ರಗಳನ್ನು ತಿರುಚಿ ಗುಜರಾತ್‌ ಚುನಾವಣೆ ಗೆದ್ದಿರುವ ಬಿಜೆಪಿಗೆ ಹಾರ್ದಿಕ ಅಭಿನಂದನೆಗಳು'' ಎಂದು ವ್ಯಂಗ್ಯವಾಡಿದ್ದಾರೆ.

ಇವಿಎಂ ತಿರುಚುವಿಕೆ ಈ ಚುನಾವಣೆಯಲ್ಲಿ ನಿಜಕ್ಕೂ ದೊಡ್ಡ ವಿಷಯವೇ ಹೌದು; ಸೂರತ್‌ ಮತ್ತು ರಾಜ್‌ಕೋಟ್‌ನಲ್ಲಿ ಇವಿಎಂ ಸಮಸ್ಯೆಗಳು ಇದ್ದವು; ಮತ ಎಣಿಕೆಯಲ್ಲಿ ಅಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮೂರು ದಿನಗಳ ಕಾಲ ನಾನು ಮತಯಂತ್ರ ತಿರುಚುವಿಕೆ ವಿಷಯವನ್ನು ಎತ್ತುತ್ತಾ ಬಂದಿದೆ. ಮತ ಯಂತ್ರಗಳ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ; ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ; ಆದರೂ ನನ್ನ ಹೋರಾಟ ಮುಂದುವರಿಯಲಿದೆ' ಎಂದು ಹಾರ್ದಿಕ್‌ ಹೇಳಿದ್ದಾರೆ. 

"ಒಟ್ಟಿನಲ್ಲಿ ಗುಜರಾತ್‌ ಚುನಾವಣಾ ಫ‌ಲಿತಾಂಶವನ್ನು ಕಂಡಾ ಗುಜರಾತ್‌ ಜನರು ಕೊನೆಗೂ ಗಾಢವಾದ ನಿದ್ದೆಯಿಂದ ಎದ್ದಿದ್ದಾರೆ ಎನ್ನಬಹುದು. ಜನರು ಬದಲಾವಣೆಗಾಗಿ ಮತ ಹಾಕಿದ್ದಾರೆ.ಆದುದರಿಂದ ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಆಗಬೇಕಿದೆ' ಎಂದು ಹಾರ್ದಿಕ್‌ ಪಟೇಲ್‌ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು. 

Trending videos

Back to Top