CONNECT WITH US  

29ರ ವಸಂತವೇ ದುರಂತವಾದಾಗ...ಮುಂಬೈ ಪಬ್‌ ಬೆಂಕಿಗಾಹುತಿ

ಮುಂಬೈ: ವೈಭವೋಪೇತ ಪಬ್‌ನಲ್ಲಿ ಕಿವಿಗಡಚಿಕ್ಕುವ ಸಂಗೀತ... ಬಣ್ಣಬಣ್ಣದ ಬೆಳಕು... ಎದುರಿಗೆ ಚಾಕೊಲೇಟ್‌ ಕೇಕ್‌.... ಇದು 29ರಂದು 29ನೇ ವರ್ಷಕ್ಕೆ ಕಾಲಿಡುವ ಸಂಭ್ರಮವನ್ನು ಆಚರಿಸಲು ತನ್ನ ಸ್ನೇಹಿತೆಯರೊಂದಿಗೆ ಖುಷ್ಬೂ ಬನ್ಸಾಲಿ ಸಿದ್ಧವಾಗಿದ್ದ ರೀತಿ. ಕೇಕ್‌ ಕತ್ತರಿಸಿದ ಹಾಗೂ ಸಂಭ್ರಮಾಚರಣೆ ಮಾಡಿದ ವಿಡಿಯೋವನ್ನು ಖುಷ್ಬೂ ಸ್ನೇಹಿತೆಯರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರಷ್ಟೆ. ಆದರೆ ಕೇಕ್‌ ಕತ್ತರಿಸಿದ ನಂತರ ಆಕೆ 29ನೇ ವರ್ಷವನ್ನು ಅನುಭವಿಸಿದ್ದು ಕೆಲವೇ ನಿಮಿಷಗಳಷ್ಟೇ! ಪಬ್‌ನಲ್ಲಿದ್ದ ಬಿದಿರಿನ ಸೆಟಪ್‌ಗೆ ಬೆಂಕಿ ತಗುಲಿ ಇಡೀ ಪಬ್‌ ನಾಶವಾಗಿತ್ತು. ಆ ಬೆಂಕಿಯು ತಪ್ಪಿಸಿ ಕೊಳ್ಳಲು ಸಾಧ್ಯವಾಗದಂತೆ ಖುಷು ಹಾಗೂ ಆಕೆಯ 10 ಸ್ನೇಹಿತೆಯರನ್ನು ಆಹುತಿ ತೆಗೆದುಕೊಂಡಿತು. ಈಗ ಆ ಪಬ್‌ನ ಕಿವಿಗಡಚಿಕ್ಕುವ ಹಾಡೇ ಸಾಮಾಜಿಕ ಜಾಲತಾಣದಲ್ಲಿ ಬರ್ತ್‌ಡೇ ವೀಡಿಯೋ ನೋಡಿದವರ ಮನಸು ಕಲಕುತ್ತಿದೆ.

ಬಹುತೇಕರು ಅಗ್ನಿ ಕಾಣಿಸಿಕೊಳ್ಳುತ್ತಿದ್ದಂತೆಯೇ ವಿಶ್ರಾಂತಿ ಕೋಣೆಯಲ್ಲಿ ಅವಿತುಕೊಂಡಿದ್ದರು. ಇದರಿಂದ ಉಸಿರಾಟ ಕಷ್ಟವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಖುಷುº ತಂದೆ ಬಾಬುಲಾಲ್‌ ಮೆಹ್ತಾ, ಪಬ್‌ನ ನಿಷ್ಕಾಳಜಿಯೇ ಈ ದುರ್ಘ‌ಟನೆಗೆ ಕಾರಣ ಎಂದಿದ್ದಾರೆ. ರಜಾ ಕಳೆಯಲು ಆಗಮಿಸಿದ್ದ ಎನ್‌ಆರ್‌ಐ ಸಾವು: ರಜಾ ಕಳೆಯುವುದಕ್ಕೆಂದು ಅಮೆರಿಕದಿಂದ ಮುಂಬೈಗೆ ಬಂದಿದ್ದ ಇಬ್ಬರು ಸೋದರರೂ ಈ ದುರ್ಘ‌ಟನೆಯಲ್ಲಿ ಸಾವನ್ನಪ್ಪಿದ್ದಾರೆ. 2 ವಾರಗಳಿಂದಲೂ ಮುಂಬೈನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರನ್ನು ಧೈರ್ಯ ಮತ್ತು ವಿಶ್ವ ಲಲಾನಿ ಭೇಟಿ ಮಾಡಿದ್ದರು. ಇವರನ್ನು ಪಾರ್ಟಿಗೆ ಕರೆದೊಯ್ಯಲು ಸಂಬಂಧಿ ಪರಿಮಳಾ ನಿರ್ಧರಿ ಸಿದ್ದ ಹಿನ್ನೆಲೆಯಲ್ಲಿ ಒನ್‌ ಅಬವ್‌ ಪಬ್‌ನ ಬಾಗಿಲ ಬಳಿಯೇ ಇದ್ದ ಟೇಬಲ್‌ ಬುಕ್‌ ಮಾಡಿದ್ದರು. ಪಾರ್ಟಿ ವೇಳೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಇಬ್ಬರು ಸೋದರರು ಹೊರಗೆ ಓಡಿ ಬಂದರಾದರೂ, ಸಂಬಂಧಿ ಪರಿಮಳಾ ಒಳಗೆ ಸಿಕ್ಕಿಕೊಂಡಿದ್ದರು. 

ಹೀಗಾಗಿ ಅವರನ್ನು ಕರೆತರಲು ಬೆಂಕಿಯಲ್ಲೇ ನುಸುಳಿ ಒಳಗೆ ಹೋದರು. ಶೌಚಾಲ ಯದ ಬಳಿ ಇವರ ಇಬ್ಬರು ಸ್ನೇಹಿತರು  ಸಿಕ್ಕಿಕೊಂಡಿದ್ದರಾದರೂ, ಅವರು ತಪ್ಪಿಸಿಕೊಂಡು ಬಂದರು. ಆದರೆ ಸೋದರರು, ಪರಿಮಳಾ ಅಗ್ನಿಗಾಹುತಿ ಯಾದರು. ಧೈರ್ಯ ಕಳೆದ 5 ವರ್ಷಗಳಿಂದಲೂ ಅಮೆರಿಕದಲ್ಲಿ ನೆಲೆಸಿದ್ದು, ಈಗಷ್ಟೇ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಮರಳಿದ್ದರು. 

ಮುಂಬೈನಲ್ಲಿ 29ರ ಭೀತಿ!
2017 ಮುಂಬೈಗೆ ಅವಘಡಗಳ ವರ್ಷ. ಅಷ್ಟೇ ಅಲ್ಲ, 29ನೇ ದಿನಾಂಕವೇ ದುಃ ಸ್ವಪ್ನವಾದಂತಾಗಿದೆ. ಈ ವರ್ಷದಲ್ಲಿ ಮುಂಬೈನಲ್ಲಿ ನಡೆದ ಅತ್ಯಂತ ಭೀಕರ ದುರ್ಘ‌ಟನೆಗಳೆಲ್ಲವೂ 29ನೇ ದಿನಾಂಕದಂದೇ ನಡೆದಿರುವುದು ವಿಚಿತ್ರವಾಗಿದೆ. ದುರ್ಘ‌ಟನೆಯ ಸರಣಿ ಆರಂಭವಾಗಿದ್ದು ಆಗಸ್ಟ್‌ 29ರಂದು. ಅಂದು ಸುರಿದ ವಿಪರೀತ ಮಳೆಯಿಂದಾಗಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸಾವಿರಾರು ಜನರು ಬೀದಿಯಲ್ಲಿ
ನಿಲ್ಲುವಂತಾಗಿತ್ತು. ಸರಿಯಾಗಿ ಒಂದು ತಿಂಗಳ ನಂತರ ಅಂದರೆ ಸೆಪ್ಟೆಂಬರ್‌ 29ರಂದು ನಡೆದ ಮತ್ತೂಂದು ದುರ್ಘ‌ಟನೆ 23 ಜನರನ್ನು ಬಲಿತೆಗೆದುಕೊಂಡಿತ್ತು. ಎಲ್ಫಿನ್‌ಸ್ಟನ್‌ ರಸ್ತೆಗೆ ನಿರ್ಮಿಸಲಾಗಿದ್ದ ರೈಲ್ವೆ ಸೇತುವೆಯ ಮೇಲೆ ಕಾಲು¤ಳಿತ ಸಂಭವಿಸಿತ್ತು. ಇನ್ನು ಶುಕ್ರವಾರ ಅಂದರೆ ಡಿಸೆಂಬರ್‌ 29ರಂದು ಅಗ್ನಿ 14 ಜನರನ್ನು ಬಲಿತೆಗೆದುಕೊಂಡಿದೆ.

ಸೆಲ್ಫಿ ಗೀಳಿಂದ ರಕ್ಷಣೆ ವಿಳಂಬ
ಮುಗಿಲೆತ್ತರಕ್ಕೆ ಅಗ್ನಿಯ ಕೆನ್ನಾಲಿಗೆ ಚಾಚುತ್ತಿದ್ದರೂ, ಬೆಂಕಿಯ ಸಮೀಪದಲ್ಲೇ ಕುಡಿದ ಮತ್ತಿನಲ್ಲಿ ತೂರಾಡುತ್ತಿರುವವವರು ಒಂದೆಡೆಯಾದರೆ, ಬೆಂಕಿ ಬೆನ್ನ ಹಿಂದೆ ಬರುತ್ತಿರುವಾಗಲೇ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಇನ್ನೊಂದೆಡೆ! ಇಂಥ ಜನರಿಂದಾಗಿಯೇ ಅಗ್ನಿ ಅನಾಹುತದಲ್ಲಿ ರಕ್ಷಣಾ
ಕಾರ್ಯಾಚರಣೆ ವಿಳಂಬವಾಗಿದೆ. ಕುಡಿತದ ಮತ್ತಿನಲ್ಲಿ ಬೇಗ ಹೊರಹೋಗುವ ದಾರಿ ಕಾಣದೆ ಹಾಗೂ ಏನು ಮಾಡಬೇಕೆಂದು ತಿಳಿಯದೇ ಶೌಚಾಲಯಕ್ಕೆ ತೆರಳಿ ಬಾಗಿಲು ಹಾಕಿಕೊಂಡವರು ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.


Trending videos

Back to Top