ಸೇನಾ ಶಸ್ತ್ರಾಸ್ತ್ರ ಖರೀದಿಯಿನ್ನು ತ್ವರಿತ
Team Udayavani, Jan 3, 2018, 11:39 AM IST
ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯವು, ಅರೆಸೇನಾ ಪಡೆಗಳಿಗಾಗಿ ಶಸ್ತ್ರಾಸ್ತ್ರ, ಉಡುಪು, ಮೂಲ ಸೌಕರ್ಯ ಪರಿಕರಗಳ ಖರೀದಿ ಪ್ರಕ್ರಿಯೆ ತ್ವರಿತವಾಗಿ ನಡೆಯುವಂಥ ನಿರ್ಧಾರ ಕೈಗೊಂಡಿದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ, ಅಧಿಕಾರಿಗಳ ಆದೇಶ, ಖರೀದಿ, ವೆಚ್ಚದ ದೃಢೀಕರಣ ಹಂತ ದಾಟಬೇಕಿತ್ತು. ಇದೀಗ, ಆದೇಶ, ದೃಢೀಕರಣ ಹಂತ ಸಮ್ಮಿಳಿನಗೊಳಿಸಿರುವ ಸಚಿವಾಲಯ ಈ ಸಂಪೂರ್ಣ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಮುಗಿಯುವಂತೆ ಕ್ರಮ ಕೈಗೊಂಡಿದೆ.
ಏತನ್ಮಧ್ಯೆ, ಭಾರತೀಯ ಸೇನೆಗೆ 1,714 ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರ ಖರೀದಿಯ ಪ್ರಸ್ತಾವನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ. ದೂರದರ್ಶನದ ಪ್ರಕಾರ, ಮಂಜೂರಾಗಿರುವ ಮೊತ್ತದಲ್ಲಿ ವಾಯುಪಡೆಗೆ 1,254 ಕೋಟಿ ಮೌಲ್ಯದ ಬಾಂಬ್ಗಳನ್ನು ಖರೀದಿಸಲಾಗುತ್ತದೆ. ನೌಕಾಪಡೆಗೆ ಕ್ಷಿಪಣಿಗಾಗಿ 460 ಕೋಟಿ ರೂ. ಮೀಸಲಿಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು