CONNECT WITH US  

500 ರೂ. ಕೊಟ್ಟರೆ ಸಾಕು, ಆಧಾರ್‌ ವಿವರ ಲಭ್ಯ!

ಕೋಲ್ಕತಾ: ಆಧಾರ್‌ ದತ್ತಾಂಶ ಸುರಕ್ಷಿತ ಎಂದು ಆಧಾರ್‌ ಪ್ರಾಧಿಕಾರ ಹೇಳಿದ್ದರೂ, ಕೇವಲ 500 ರೂ. ನೀಡಿದರೆ ಕೋಟ್ಯಂತರ ಆಧಾರ್‌ ಖಾತೆಯ ಮಾಹಿತಿ ಪಡೆಯಬಹುದು ಎಂದು ಕೋಲ್ಕತಾ ದಿ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ.

ಅನಾಮಿಕ ವ್ಯಕ್ತಿ ಯೊಬ್ಬನನ್ನು ವಾಟ್ಸ್‌ಆ್ಯಪ್‌ ಮೂಲಕ ಸಂಪ ರ್ಕಿಸಿದಾಗ, ಆತ ಕೇವಲ 500 ರೂ. ಪಡೆದು ಕೊಂಡು ಆಧಾರ್‌ ದತ್ತಾಂಶಕ್ಕೆ ಲಾಗಿನ್‌ ಮಾಡಲು ಬಳಕೆದಾರರ ಹೆಸರು ಹಾಗೂ ಪಾಸ್‌ವರ್ಡ್‌ ನೀಡಿದ್ದ. ಇದನ್ನು ಬಳಸಿ ಈವರೆಗೆ ನೋಂದಾಯಿ ಸಿಕೊಂಡ ಎಲ್ಲರ ವಿಳಾಸ ಸೇರಿದಂತೆ ಸಮಗ್ರ ಮಾಹಿತಿ ಪಡೆಯ ಬಹು ದಾಗಿದೆ ಎಂದು ವರದಿ ಮಾಡಲಾಗಿದೆ. ಆದರೆ ದತ್ತಾಂಶ ಸೋರಿಕೆ  ಅಲ್ಲಗಳೆದಿರುವ ಪ್ರಾಧಿಕಾರ , ದೂರು ಪರಿಹಾರ ವಿಭಾಗಕ್ಕೆ ಆಧಾರ್‌ ವಿವರ ಹುಡುಕುವ ಸೌಲಭ್ಯ ಒದಗಿಸಿದೆ. ಇಲ್ಲಿನ ಯಾರೋ ದುರ್ಬಳಕೆ ಮಾಡಿಕೊಳ್ಳುತ್ತಿರಬಹುದು. ಆದರೆ ಇಲ್ಲಿ ಪ್ರತಿ ಲಾಗಿನ್‌ಗಳನ್ನೂ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದಿದೆ. 

Trending videos

Back to Top