CONNECT WITH US  

ಜಾತಿ, ಮತ ಭೇದ ಬಿಟ್ಟು ಒಂದಾಗಿ: ಭಾಗವತ್‌ ಕರೆ

ಉಜ್ಜಯಿನಿ: ಭಾರತದ ನಾಗರಿಕರು ಜಾತಿ, ಮತ, ವಿಚಾರ ಭೇದ ಮರೆತು ತಾಯ್ನಾಡಿಗಾಗಿ ಒಂದಾಗಬೇಕೆಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿನ ಹಿಂಸಾಚಾರದ ಬೆನ್ನಲ್ಲೇ ಭಾಗವತ್‌ ನೀಡಿರುವ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಉಜ್ಜಯಿನಿಯಲ್ಲಿ ಶುಕ್ರವಾರ ಭಾರತ ಮಾತೆಯ 16 ಅಡಿ ಪ್ರತಿಮೆ ಉದ್ಘಾಟಿಸಿ ಮಾತನಾಡಿದ ಅವರು, "ಭಾರತ ಕೇವಲ ಭೂಮಿಯ ತುಣುಕಲ್ಲ. ಇದು ಎಲ್ಲಕ್ಕೂ ಮಿಗಿಲಾದದ್ದು. ಹಾಗಾಗಿ, ನಮ್ಮ ಗುರಿ ತಾಯ್ನೆಲದ ರಕ್ಷಣೆಗಾಗಿಯೇ ಇರಬೇಕು. ಜಾತಿವಾದ, ಈರ್ಷ್ಯೆಗಳಿಂದ ಹೊರಬರಬೇಕು'' ಎಂದರು. ಡಿಎಂಕೆ ಸಂಸ್ಥಾಪಕ ಅಣ್ಣಾದುರೈ ಅವರನ್ನು ನೆನೆದ ಭಾಗವತ್‌, "ಹಿಂದೊಮ್ಮೆ ಅಣ್ಣಾದುರೈ ತಮಿಳುನಾಡನ್ನು ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡಿದ್ದರು. ಆದರೆ, 1962ರಲ್ಲಿ ಚೀನ, ಭಾರತದ ಮೇಲೆ ಆಕ್ರಮಣ ಮಾಡಿದಾಗ ನಿಲುವು ಬದಲಿಸಿ ಭಾರತದ ಬೆಂಬಲಕ್ಕೆ ನಿಂತರು. ಇದೇ ನಿಜವಾದ ರಾಷ್ಟ್ರೀಯತೆ'' ಎಂದು ತಿಳಿಸಿದರು.

Trending videos

Back to Top