ಶೌಚಕ್ಕೆ ಕುಳಿತಿದ್ದ ಗಂಡನ ಮೇಲೆ ಗುಂಡು ಹಾರಿಸಿದ ಪತ್ನಿ
Team Udayavani, Jan 11, 2018, 4:07 AM IST
ಹೆಂಡತಿಯ ಮಾತನ್ನು ಗಂಡ ನಿರ್ಲಕ್ಷಿಸುವುದು, ಆದರೂ ಹೆಂಡತಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು ಬಹುತೇಕ ಕುಟುಂಬದಲ್ಲಿ ನಡೆಯುವ ಸಾಮಾನ್ಯ ಸಂಗತಿ. ಎಷ್ಟು ಹೇಳಿದರೂ ಗಂಡ ತನ್ನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳುವುದೇ ಇಲ್ಲ ಎಂದಾಗ ಹೆಂಡತಿ ಕೋಪ ಯಾವ ಹಂತ ತಲುಪಬಹುದು ಎಂಬುದನ್ನು ಅಮೆರಿಕದಲ್ಲಿ ನಡೆದ ಘಟನೆಯೊಂದು ಹೇಳುತ್ತದೆ.
ಶೌಚಕ್ಕೆಂದು ಕುಳಿತಿದ್ದ ಗಂಡನ ಕಡೆಗೆ ಉದ್ರಿಕ್ತ ಹೆಂಡತಿಯೊಬ್ಬಳು ಬಂದೂಕಿನಿಂದ 2 ಸುತ್ತು ಗುಂಡುಗಳನ್ನು ಹಾರಿಸಿದ್ದಾಳೆ. ಈ ಕುರಿತು ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. 2 ದಿನಗಳಿಂದ ನನ್ನ ಪತ್ನಿ ಸಿಡಿಮಿಡಿ ಮಾಡುತ್ತಿದ್ದಳು. ನಾನು ಶೌಚಾಲಯಕ್ಕೆ ಹೋಗಿದ್ದಾಗ, ಬಂದು ನನ್ನ ಮೇಲೆ 2 ಗುಂಡು ಹಾರಿಸಿದಳು. ಅವು ನನ್ನ ತಲೆ ಮೇಲಿನ ಗೋಡೆ ಮೇಲೆ ಬಿದ್ದವು ಎಂದಿದ್ದಾರೆ.
ಆದರೆ ಅವರ ಪತ್ನಿ, “ನನ್ನ ಮಾತನ್ನು ಗಂಡ ಕೇಳುತ್ತಿರಲಿಲ್ಲ. ಅವರ ಗಮನ ನನ್ನ ಕಡೆ ಸೆಳೆಯಲು ಗೋಡೆಗೆ ಗುಂಡು ಹಾರಿಸಿದೆ’ ಎಂದಿದ್ದಾರೆ. ಇವರಿಬ್ಬರದ್ದೂ 35 ವರ್ಷಗಳ ದಾಂಪತ್ಯವಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ