CONNECT WITH US  
echo "sudina logo";

ಸ್ವಾಮಿ ಧರ್ಮಬಂಧು ಶಿಬಿರದಲ್ಲಿ ಅಗ್ನಿ ದುರಂತ: 3 ಬಾಲಕಿಯರ ಸಾವು

ರಾಜ್‌ಕೋಟ್‌ : ನಿನ್ನೆ ಶುಕ್ರವಾರ ತಡ ರಾತ್ರಿ ಗುಜರಾತ್‌ನ ರಾಜ್‌ಕೋಟ್‌ನ ಪ್ರಾಂಸ್ಲಾ ಗ್ರಾಮದಲ್ಲಿ ನಡೆಯುತ್ತಿದ್ದ ಸ್ವಾಮಿ ಧರ್ಮಬಂಧು ಅವರ "ರಾಷ್ಟ್ರ ಕಥಾ ಶಿಬಿರ'ದಲ್ಲಿ ಭೀಕರ ಅಗ್ನಿ ಅವಘಡ ಉಂಟಾಗಿ ಮೂವರು ಬಾಲಕಿಯರು ಮೃತಪಟ್ಟು ಇತರ 15 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಗ್ನಿ ಅವಘಡ ಸಂಭವಿಸಿದೊಡನೆಯೇ ಅನೇಕ ಅಗ್ನಿಶಾಮಕಗಳು ಸ್ಥಳಕ್ಕೆ ಧಾವಿಸಿ ಬಂದು ಸ್ವಲ್ಪವೇ ಹೊತ್ತಿನಲ್ಲಿ ಬೆಂಕಿಯನ್ನು ನಿಯಂತ್ರಿಸಿದರು. 

ಸ್ವಾಮಿ ಧರ್ಮಬಂಧು ಅವರ ಉಪನ್ಯಾಸ ಕೇಳಲು ಭಾರೀ ಸಂಖ್ಯೆ ಅನಿವಾಸಿ ಭಾರತೀಯರೂ ಕೂಡ ಶಿಬಿರಕ್ಕೆ ಬಂದಿದ್ದರು. ಬೆಂಕಿ ಅವಘಡ ಸಂಭವಿಸಿದೊಡನೆಯೇ 500ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಯಿತು. ಗಾಯಾಳುಗಳನ್ನು ಒಡನೆಯೇ ಆಸ್ಪತ್ರೆಗೆ ಸೇರಿಸಲಾಯಿತು. 

Trending videos

Back to Top