CONNECT WITH US  

8 ಸಾವಿರ ಕೋಟಿ ರೂ.ಗೆ ವಾರಸುದಾರರೇ ಇಲ್ಲ

ಹೊಸದಿಲ್ಲಿ: ದೇಶದಾದ್ಯಂತ ನಾನಾ ಬ್ಯಾಂಕು ಗಳಲ್ಲಿ ಅನಾಥವಾಗಿರುವ ಖಾತೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು, ಇಂಥ ಖಾತೆಗಳಲ್ಲಿ ಸುಮಾರು 8 ಸಾವಿರ ಕೋಟಿ ರೂ.ಹಣ ನಿರುಪ ಯುಕ್ತವಾಗಿ ಉಳಿದಿದೆಯೆಂದು ಆರ್‌ಬಿಐ ತಿಳಿಸಿದೆ. 

2017ರ ಡಿ. 16ರವರೆಗಿನ ಮಾಹಿತಿಯಂತೆ ದೇಶದಲ್ಲಿ ಇಂಥ 2.63 ಕೋಟಿ ಬ್ಯಾಂಕ್‌ ಖಾತೆಗಳಿದ್ದು, ಇವುಗಳಲ್ಲಿ 8,864.6 ಕೋಟಿ ರೂ. ಹಣವಿದೆ. ಅನಾಮಧೇಯ ವ್ಯಕ್ತಿಗಳಿಂದ ಕೆಲ ಬ್ಯಾಂಕ್‌ಗಳ ಖಾತೆಗೆ ಹಣ ಜಮೆ ಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹಾಗೂ ಮೌಲ್ಯಗಳಲ್ಲೂ ಗಣನೀಯ ಹೆಚ್ಚಳವಾಗಿದೆ ಎಂದು ಆರ್‌ಬಿಐ ಹೇಳಿದೆ. 

ನಾಲ್ಕು ವರ್ಷಗಳಲ್ಲಿ ಅಧಿಕ: 2012ರಲ್ಲಿ 1.32 ಕೋಟಿ ಖಾತೆಗಳಿಗೆ ಹೀಗೆ ಹಣ ಹರಿದುಬಂದಿದ್ದರೆ, 2016ರಲ್ಲಿ 2.63 ಕೋಟಿ ಖಾತೆಗಳಿಗೆ ಇಂಥ ಹಣ ಜಮೆಯಾಗಿದೆ. ಇದಲ್ಲದೆ, 2012ರಲ್ಲಿ 3,598 ಕೋಟಿ ರೂ.ಗಳಷ್ಟಿದ್ದ ಈ ಅನಾಥ ಧನ, 2016ರ ಹೊತ್ತಿಗೆ 8,864 ಕೋಟಿ ರೂ.ಗಳಿಗೆ ಬಂದು ಮುಟ್ಟಿದೆ. ಆದರೆ, ಈ ಹಣವನ್ನು ಪಡೆದುಕೊಳ್ಳಲು ಯಾರೂ ಬಂದಿಲ್ಲ ಎಂದಿದೆ ಆರ್‌ಬಿಐ.


Trending videos

Back to Top