ವಿಕಲಾಂಗರ ಶೌಚಾಲಯ ದುರುಪಯೋಗ: ಗುತ್ತಿಗೆದಾರನ ವಿರುದ್ಧ ಕೇಸು
Team Udayavani, Jan 22, 2018, 12:01 PM IST
ಥಾಣೆ : ಇಲ್ಲಿನ ರೈಲು ನಿಲ್ದಾಣದಲ್ಲಿ ವಿಕಲಾಂಗರಿಗೆಂದು ನಿರ್ಮಿಸಲ್ಪಟ್ಟಿದ್ದ ಶೌಚಾಲಯಲವನ್ನು ಗುತ್ತಿಗೆದಾರನು ಎಲ್ಲರಿಗೂ ಬಳಸಲು ಅವಕಾಶ ಮಾಡಿಕೊಡುವ ಮೂಲಕ ದುರಪಯೋಗಿಸಿದ್ದಾನೆ ಎಂದು ಎನ್ಜಿಓ ಸಂಘಟನೆಯೊಂದು ನೀಡಿದ ದೂರನ್ನು ಪರಾಂಬರಿಸಿದ ಕೋಪ್ರಿ ಠಾಣೆಯ ಪೊಲೀಸರು ಆರೋಪಿ ಕಂಟ್ರಾಕುrದಾರ ಮತ್ತು ಇತರ ಮೂವರ ವಿರುದ್ಧ ಅಪರಾಧದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗುತ್ತಿಗೆದಾರನ ಈ ಕೃತ್ಯದಿಂದಾಗಿ ವಿಕಲಾಂಗರಿಗೆ ತೊಂದರೆಯಾಗಿದೆ ಎಂದು ಪ್ರಹಾರ್ ಅಪಾಂಗ್ ರೈಲ್ವೇ ಪ್ರವಾಸಿ ಸಂಘಟನೆಯು ಪೊಲೀಸರಿಗೆ ದೂರು ನೀಡಿತ್ತು. ಶೌಚಾಲಯವನ್ನು ಗುತ್ತಿಗೆಗೆ ಪಡೆದಿದ್ದ ಗುತ್ತಿಗೆದಾರ ಮತ್ತು ಇತರ ಮೂವರ ವಿರುದ್ಧ ಈಗ ತನಿಖೆ ನಡೆಯುತ್ತಿದೆ.