CONNECT WITH US  

ಬಿಜೆಪಿ ನಾಯಕರ ಮರ್ಜಿಯಂತೆ ದೇಶ ನಡೆಯುತ್ತಿದೆ: ಹಾರ್ದಿಕ್‌

ಅಹ್ಮದಾಬಾದ್‌ : ಈ ದೇಶ ಸಂವಿಧಾನಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ; ಬದಲಾಗಿ ಬಿಜೆಪಿ ನಾಯಕರಿಗೆ ಖುಷಿ ಬಂದ ರೀತಿಯಲ್ಲಿ , ಅವರ ಮರ್ಜಿಗೆ ಅನುಗುಣವಾಗಿ, ನಡೆಯುತ್ತಿದೆ ಎಂದು ಗುಜರಾತಿನ ಪಾಟಿದಾರ್‌ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರ ಉತ್ತರ ಪ್ರದೇಶ ಸರಕಾರ ಮುಜಫ‌ರನಗರದ 2013ರ ದೊಂಬಿ ಪ್ರಕರಣದಲ್ಲಿನ ಬಿಜೆಪಿಯ ಆರೋಪಿಗಳ ವಿರುದ್ಧದ ಕೇಸುಗಳನ್ನು ಹಿಂಪಡೆಯಲಾಗುವುದೆಂದು ಹೇಳಿದೆ. ಅಧಿಕಾರದಲ್ಲಿರುವ ಪಕ್ಷವೊಂದು ತನ್ನದೇ ಜನರ ವಿರುದ್ಧದ ಕೇಸುಗಳನ್ನು ಹಿಂಪಡೆಯುವುದು ಹೇಗೆ ಸಾಧ್ಯ ? ಹಾಗೆ ಮಾಡಿದಲ್ಲಿ ಅದು ಪಕ್ಷಪಾತಿ ಸರಕಾರ ಆಗುವುದಿಲ್ಲವೇ ಎಂದು ಹಾರ್ದಿಕ್‌ ತಮ್ಮ ಟ್ವಿಟರ್‌ನಲ್ಲಿ  ಪ್ರಶ್ನಿಸಿದ್ದಾರೆ. 

ವೃತ್ತಿಪರ ಗೂಂಡಾಗಳು ಬಿಜೆಪಿಗೆ ಸೇರಿದಲ್ಲಿ ಅವರನ್ನು ನಾವು ಗೂಂಡಾಗಳೆಂದು ಕರೆಯುವಂತಿಲ್ಲ; ಏಕೆಂದರೆ ಆ ಗೂಂಡಾಗಳ ಮೇಲಿನ ಕೇಸುಗಳನ್ನು ಬಿಜೆಪಿ ಸರಕಾರ ಹಿಂಪಡೆಯುತ್ತದೆ ಎಂದು 24ರ ಹರೆಯದ ಹಾರ್ದಿಕ್‌ ಲೇವಡಿ ಮಾಡಿದರು.

Trending videos

Back to Top