ಪತ್ನಿಯನ್ನು ಸುಟ್ಟು ಕೊಂದ ಪತಿಗೆ ಜೀವಾವಾಧಿ ಜೈಲು ಶಿಕ್ಷೆ
Team Udayavani, Jan 24, 2018, 12:39 PM IST
ಥಾಣೆ : 2013ರಲ್ಲಿ ಪತ್ನಿಯನ್ನು ಕೊಲೈಗೈದಿದ್ದ 37ರ ಹರೆಯದ ವ್ಯಕ್ತಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕೊಲೆ ಆರೋಪಿಯ ಇಬ್ಬರು ಹದಿ ಹರೆಯದ ಮಕ್ಕಳು ನೀಡಿದ್ದ ಸಾಕ್ಷ್ಯವನ್ನೇ ಅವಲಂಬಿಸಿದ ಜಿಲ್ಲಾ ನ್ಯಾಯಾಧೀಶ ಎಚ್ ಎಂ ಪಟವರ್ಧನ್ ಅವರು ಕೊಲೆ ಆರೋಪಿಯಾಗಿರುವ ಮುಂಬ್ರಾ ಟೌನ್ಶಿಪ್ ನಿವಾಸಿ ಬಾಳಾಸಾಹೇಬ್ ಅಮೃತ್ ಬಸ್ವಂತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿದರಲ್ಲದೆ 10,000 ರೂ. ದಂಡ ವಿಧಿಸಿದರು.
ಪತ್ನಿಯೊಂದಕ್ಕೆ ಸದಾ ಜಗಳವಾಡುತ್ತಿದ್ದ ಬಸ್ವಂತ್, 2013ರ ಡಿಸೆಂಬರ್ 21ರಂದು ಪತ್ನಿಯ ಮೇಲಿನ ಸಿಟ್ಟಿನ ಆವೇಶದಲ್ಲಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಎರಡು ದಿನಗಳ ಬಳಿಕ ಆಕೆ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.
ಈ ದಂಪತಿಗೆ ಇಬ್ಬರು ಪುತ್ರರಿದ್ದು 10 ಮತ್ತು 9 ನೇ ತರಗತಿಯಲ್ಲಿ ಓದುತ್ತಿರುವ ಅವರು ಘಟನೆ ನಡೆದ ದಿನದ ಬಗ್ಗೆ ಸಾಕ್ಷಿ ನುಡಿದಿದ್ದರು.