CONNECT WITH US  

ಮಹಾತ್ಮ ಗಾಂಧಿ ಒಬ್ಬ ಜಾತಿವಾದಿ: ಲೇಖಕಿ ಸುಜಾತ

Sujatha Gidla

ಜೈಪುರ: ಮಹಾತ್ಮ ಗಾಂಧಿ ಒಬ್ಬ ಜಾತಿವಾದಿ. ಜನಾಂಗೀಯ ವಾದಿ. ದಲಿತರ ಅಭಿವೃದ್ಧಿ ಬಗ್ಗೆ ಅವರು ನಾಟಕೀಯವಾಗಿ ಮಾತನಾಡುತ್ತಿದ್ದರಷ್ಟೇ. ತಮ್ಮ ರಾಜಕೀಯ ಲಾಭಕ್ಕಾಗಿ ಅವರು ಹಾಗೆ ಮಾಡುತ್ತಿದ್ದರು' ಎಂದು ಭಾರತೀಯ ಮೂಲದ ಅಮೆರಿಕದ ಸಾಹಿತಿ
ಸುಜಾತ ಗಿಡ್ಲಾ ಹೇಳಿದ್ದಾರೆ. 

ಜೈಪುರ ಸಾಹಿತ್ಯೋತ್ಸವದಲ್ಲಿ ತಾವು ಮಾಡಿದ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, "ಗಾಂಧೀಜಿ, ಭಾರತದಲ್ಲಿದ್ದ ಜಾತಿ ಪದ್ಧತಿಯನ್ನು ಕಾಪಾಡುವ ಇರಾದೆ ಹೊಂದಿದ್ದರು. ಆದರೆ, ಬ್ರಿಟಿಷ್‌ ಸರ್ಕಾರದಲ್ಲಿ ಮುಸ್ಲಿಮರಿಗಿಂತ ಹೆಚ್ಚು ಪ್ರಾತಿನಿಧ್ಯ ಹೊಂದಲು ಹಿಂದೂಗಳಿಗೆ ಬಹುಮತದ ಅಗತ್ಯವಿತ್ತು.

ಹಾಗಾಗಿಯೇ, ಅವರು ಹಿಂದೂಗಳನ್ನು ಒಗ್ಗೂಡಿಸಲು ದಲಿತರ ಅಭಿವೃದ್ಧಿಯ ಢೋಂಗಿತನ ಪ್ರದರ್ಶಿಸಿದರು. ರಾಜಕಾರಣಿಗಳು ಸಾಮಾನ್ಯವಾಗಿ ದಲಿತರ ಪರ ದನಿಯೆತ್ತುವಾಗ ಇಂಥ ರಾಜಕೀಯ ಲಾಭಗಳೇ ಇರುತ್ತವಷ್ಟೆ' ಎಂದು ದಲಿತರೇ ಆಗಿರುವ ಸುಜಾತ ತಿಳಿಸಿದ್ದಾರೆ. 


Trending videos

Back to Top