CONNECT WITH US  

CRPF ಕ್ಯಾಂಪ್‌ ಮೇಲೆ ಉಗ್ರ ದಾಳಿ ವಿಫ‌ಲ: ಶೋಧ ಕಾರ್ಯಾಚರಣೆ

ಶ್ರೀನಗರ : ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇಂದು ಮಂಜಾನೆ ಇಬ್ಬರು ಭಾರೀ ಶಸ್ತ್ರಧಾರಿ ಉಗ್ರರು ಸಿಆರ್‌ಪಿಎಫ್ ಕ್ಯಾಂಪ್‌ ಕಡೆಗೆ ಧಾವಿಸಿ ಬರುತ್ತಿರುವುದನ್ನು ಠಾಣೆಯಲ್ಲಿ ಕರ್ತವ್ಯ ನಿರತ ಯೋಧರು ಒಡನೆಯೇ ಗಮನಿಸಿ ಗುಂಡಿನ ದಾಳಿ ನಡೆಸಿದರು. ಉಗ್ರರು ತತ್‌ಕ್ಷಣ ಸ್ಥಳದಿಂದ ಪರಾರಿಯಾದರು. 

ಉಗ್ರರು ಬೆನ್ನಿಗೆ ಭಾರವಾದ ಚೀಲ ಮತ್ತು ಎಕೆ 47 ರೈಫ‌ಲ್‌ ಹೊಂದಿದ್ದರು. ಪರಾರಿಯಾಗಿರುವ ಈ ಇಬ್ಬರು ಉಗ್ರರಿಗಾಗಿ ಈಗ ವ್ಯಾಪಕ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಉಗ್ರರು ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ದಾಳಿ ನಡೆಸುವ ಉದ್ದೇಶದದಿಂದಲೇ ಬಳಿ ಸಾರಿ ಬಂದಿದ್ದರು ಎಂಬುದು ಸ್ಪಷ್ಟವಾಗಿತ್ತು. 

ಸಂಜುವಾನ್‌ ಸೇನಾ ಶಿಬಿರಗದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಜತೆಗೆ ಒಬ್ಬ ಪೌರ ಕೂಡ ಹತರಾಗಿದ್ದರು; ಅನೇಕರು ಗಾಯಗೊಂಡಿದ್ದರು. 

ಈ ದಾಳಿಯ ವೇಳೆ ಪ್ರತಿದಾಳಿ ಸಂಘಟಿಸಿದ ಯೋಧರು ನಾಲ್ಕು ಉಗ್ರರನ್ನು ಗುಂಡು ಹೊಡೆದು ಕೊಂದಿದ್ದರು. ಈ ಕಾರ್ಯಾಚರಣೆ ಒಂದು ದಿನ ಮೀರಿತ್ತು. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top