CONNECT WITH US  

ಪತ್ನಿ ಬಿಟ್ಟರೆ ಎನ್ನಾರೈಗೆ ಆಸ್ತಿ ನಷ್ಟ

ಸಿಆರ್‌ಪಿಸಿ ಕಾನೂನು ತಿದ್ದುಪಡಿಗೆ ಪ್ರಸ್ತಾವನೆ

ಹೊಸದಿಲ್ಲಿ: ಭಾರತದಲ್ಲೇ ಪತ್ನಿಯನ್ನು ತೊರೆದು ವಿದೇಶಗಳಿಗೆ ತೆರಳಿ ಇನ್ನು ತಲೆಮರೆಸಿಕೊಳ್ಳುವುದು ಸಾಧ್ಯವಿಲ್ಲ. ಹಾಗೊಂದು ವೇಳೆ ಮಾಡಿದರೂ ಭಾರತದಲ್ಲಿರುವ ತನ್ನ ಕುಟುಂಬದ ಎಲ್ಲ ಆಸ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಭಾರತದಲ್ಲಿ ಪತ್ನಿ ಬಿಟ್ಟು ನಾಪತ್ತೆಯಾಗುವ ಎನ್‌ಆರ್‌ಐ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಪರಾಧ ಕಾನೂನಿನಲ್ಲಿ (ಸಿಆರ್‌ಪಿಸಿ) ಈ ಸಂಬಂಧ ಸೂಕ್ತ ತಿದ್ದುಪಡಿ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ವಿದೇಶಾಂಗ ಸಚಿವಾಲ ಯವು ಗೃಹ ಮತ್ತು ಕಾನೂನು ಸಚಿವಾಲ ಯಕ್ಕೆ ಕಳುಹಿಸಿದೆ. ಭಾರತದಲ್ಲೇ ಪತ್ನಿಯನ್ನು ತೊರೆದು ವಿದೇಶಕ್ಕೆ ತೆರಳಿ, ಈ ಸಂಬಂಧದ ಪ್ರಕರಣದಲ್ಲಿ ಮೂರಕ್ಕೂ ಹೆಚ್ಚು ಬಾರಿ ನೋಟಿಸ್‌ ಕೊಟ್ಟರೂ ಉತ್ತರಿಸದಿದ್ದರೆ ಅವರ ಕುಟುಂಬದವರ ಆಸ್ತಿಯನ್ನು ಮುಟ್ಟುಗೋ ಲು ಹಾಕಿಕೊಳ್ಳಬಹುದು ಎಂಬುದಾಗಿ ಕಾಯ್ದೆ ಯಲ್ಲಿ ತಿದ್ದುಪಡಿ ತರಲು ಪ್ರಸ್ತಾವಿಸಲಾಗಿದೆ.

ಎನ್‌ಆರ್‌ಐಗಳು ಪತ್ನಿಯರ ವಿಷಯಕ್ಕೆ ಕೋರ್ಟ್‌ ನೀಡುವ ಸಮನ್ಸ್‌ ಅನ್ನು ನಿರ್ಲಕ್ಷಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಿಆರ್‌ಪಿಸಿ ಕಾನೂನು ಬದಲಾದರೆ ಹೀಗೆ ಮಾಡಲಾಗದು. ಮೂರು ಸಮನ್ಸ್‌ ನೀಡಿದರೂ ಉತ್ತರಿಸದಿದ್ದರೆ, ಅಂಥವರನ್ನು "ತಲೆಮರೆಸಿಕೊಂಡವರು' ಎಂದು ಪರಿಗಣಿಸ ಲಾಗುತ್ತದೆ ಮತ್ತು ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ತಲೆಮರೆಸಿಕೊಂಡವರ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ಮಹತ್ವದ ಕ್ರಮ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತರು ಪ್ರಾಪ್ತ ವಯಸ್ಕರಾದ ನಂತರ ಅಥವಾ ಹಲವು ವರ್ಷಗಳ ನಂತರವೂ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸುವ ಬಗ್ಗೆಯೂ ಸಿಆರ್‌ಪಿಸಿಯಲ್ಲಿ ತಿದ್ದುಪಡಿ ತರಲು ಪ್ರಸ್ತಾವಿ ಸಲಾಗಿದೆ. ಆದರೆ ಇಂಥ ಪ್ರಕರಣಗಳಲ್ಲಿ ಆರೋಪ ಸಾಬೀತಿಗೆ ಸಮಯ ತಗಲುತ್ತದೆ ಎಂದು ಮೇನಕಾ ಅಭಿಪ್ರಾಯಪಟ್ಟಿದ್ದಾರೆ.


Trending videos

Back to Top