ಪಿಎನ್‌ಬಿ ಹಗರಣದ ರಾಡಿಯಲ್ಲಿ ಕೆಸರೆರಚಾಟ


Team Udayavani, Feb 18, 2018, 8:15 AM IST

a-40.jpg

ಹೊಸದಿಲ್ಲಿ: ಬಹುಕೋಟಿ ಪಿಎನ್‌ಬಿ ಹಗರಣ ಬೆಳಕಿಗೆ ಬಂದಾಗಿನಿಂದಲೂ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಕೆಸರೆರಚಾಟ ಶುರುವಾಗಿದ್ದು, ಶನಿವಾರ ಅದು ತೀವ್ರಗೊಂಡಿದೆ. ಹಗರಣಕ್ಕೆ ಬಿಜೆಪಿಯೇ ಕಾರಣ ಎಂದು ಹರಿಹಾಯ್ದಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ, “ಆಪ್ತ ವಲಯದ ಹೂಡಿಕೆ’ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದು ಅವುಗಳಿಗೆ ಸಾಂಸ್ಥಿಕ ರೂಪ ಕೊಡಲಾರಂಭಿಸಿದ್ದಾರೆ ಎಂದು ಟೀಕಿಸಿದೆ. ಇದಕ್ಕೆ ಬಿಜೆಪಿಯೂ ತಿರುಗೇಟು ನೀಡಿದ್ದು, ಹಗರಣದ ಪ್ರಮುಖರಿಗೂ ಕಾಂಗ್ರೆಸ್‌ಗೂ ಸಂಬಂಧವಿದೆ ಎಂದು ಆರೋಪಿಸಿದೆ.

“ನೀರವ್‌ ಆಯೋಜಿಸಿದ್ದ ಸಮಾರಂಭವೊಂದಕ್ಕೆ ತಾವು ಹೋಗಿದ್ದನ್ನು ಪ್ರಸ್ತಾಪಿಸುತ್ತಿರುವ ಬಿಜೆಪಿ, ಇಡೀ ಹಗರಣವನ್ನು ಮತ್ತೂಂದು ದಿಕ್ಕಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. 2013ರಲ್ಲಿ ನೀರವ್‌ ಆಯೋಜಿಸಿದ್ದ ಸಮಾರಂಭವೊಂದಕ್ಕೆ ರಾಹುಲ್‌ ಗಾಂಧಿ ಹೋಗಿದ್ದನ್ನು ಪ್ರಸ್ತಾಪಿಸಿರುವ ಬಿಜೆಪಿ ನಾಯಕರು, ರಾಹುಲ್‌ ಅವರಿಗೆ ನೀರವ್‌ ಅವರೊಂದಿಗೆ ಗಾಢ ನಂಟಿತ್ತು ಎಂದು ಟೀಕಿಸಿದ್ದಾರೆ. ಆನಂತರ, ಮೋದಿ ವಿರುದ್ಧ ತಮ್ಮ ವಾಗ್ಬಾಣ ಬಿಟ್ಟ ರಾಹುಲ್‌, “”ಪ್ರಧಾನಿ ಮೋದಿ ಅವರಿಗೆ ಈ ಹಗರಣದಲ್ಲಿ ಏನಾಗಿದೆ ಎಂಬುದು ಗೊತ್ತಿದೆ. ಹಾಗಾಗಿ, ಅವರು ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಅದು ಬಿಟ್ಟು, ಸಾಮಾಜಿಕ ನ್ಯಾಯ ಸಚಿವ ಹಾಗೂ ರಕ್ಷಣಾ ಸಚಿವೆಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸುವುದು ಸರಿಯಲ್ಲ. ಮಕ್ಕಳಿಗೆ ಹೇಗೆ ಪರೀಕ್ಷೆ ಎದುರಿಸಬೇಕೆಂದು 1 ಗಂಟೆ 50 ನಿಮಿಷಗಳ ಸಲಹೆ ನೀಡುವ ಪ್ರಧಾನಿಗೆ ದೇಶವನ್ನೇ ತಲ್ಲಣ ಗೊಳಿಸಿರುವ ಹಗರಣದ ಬಗ್ಗೆ ಮಾತನಾಡಲು ಸಮಯವಿ ಲ್ಲವೇ? ನೋಟು ಅಮಾನ್ಯ ಮಾಡಿ ಜನರ ದುಡ್ಡನ್ನೆಲ್ಲ ಬ್ಯಾಂಕಿಗೆ ಹಾಕಿಸಿದರು. ಈಗ  ಅವರ ಗೆಳೆಯರೇ ಬ್ಯಾಂಕ್‌ನಿಂದ ದುಡ್ಡನ್ನು ಕದಿಯುತ್ತಿದ್ದಾರೆ. ಆದರೂ, ಪ್ರಧಾನಿ ಮೋದಿ ಮೌನವಹಿಸಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ. 

ನಿರ್ಮಲಾ ಪ್ರಶ್ನೆ: ಇದಕ್ಕೂ ಮುನ್ನ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, “2013ರಲ್ಲಿ, ರಾಹುಲ್‌ ಗಾಂಧಿ ನೀರವ್‌ ಒಡೆತನದ ಗೀತಾಂಜಲಿ ಜ್ಯುವೆಲರ್ಸ್‌ನ ಸಮಾರಂಭದಲ್ಲಿ ಪಾಲ್ಗೊಂಡಿ ದ್ದರು. ಹಾಗಾಗಿ, ಅವರೂ ಹಗರಣದ ವಿಚಾರದಲ್ಲಿ ನೈತಿಕ ಹೊಣೆ ಹೊರಬೇಕು” ಎಂದು ಆಗ್ರಹಿಸಿದ್ದರು. ಅಲ್ಲದೆ, ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂ Ì ಅವರ ಪತ್ನಿ ಹಾಗೂ ಪುತ್ರ, ನೀರವ್‌ ಮೋದಿ ಒಡೆತನದ ಕಂಪನಿಯಲ್ಲಿ ಷೇರು ಹೊಂದಿದ್ದಾರೆಂದು ಆರೋಪಿಸಿದ್ದರು. “”ಫೈರ್‌ ಸ್ಟಾರ್‌ ಡೈಮಂಡ್‌ ಇಂಟರ್‌ನ್ಯಾಷನಲ್‌ ಪ್ರೈ. ಲಿ. ಸಂಸ್ಥೆಯು ನೀರವ್‌ ಮೋದಿಗೆ ಸೇರಿದ್ದು. ಮುಂಬಯಿಯ ಲೋಯರ್‌ ಪರೆಲ್‌ನಲ್ಲಿರುವ ಟ್ರೇಡ್‌ ಪಾಯಿಂಟ್‌ ಬಿಲ್ಡಿಂಗ್‌ನಲ್ಲಿರುವ ಅದ್ವೆ„ತ್‌ ಹೋಲ್ಡಿಂಗ್‌ ಲಿಮಿಟೆಡ್‌ಗೆ ಸೇರಿದ ಕಟ್ಟಡದ ಒಂದು ಭಾಗವನ್ನು ಫೈರ್‌ ಸ್ಟಾರ್‌ ಡೈಮಂಡ್‌ ಸಂಸ್ಥೆ ಭೋಗ್ಯಕ್ಕೆ ಪಡೆದುಕೊಂಡಿದೆ. ಅದ್ವೆ„ತ್‌ ಲಿ.ನಲ್ಲಿ ಮನು ಸಿಂ Ì ಪತ್ನಿ ಅನಿತಾ ಸಿಂ Ì ಪಾಲುದಾರರು. ಹಾಗಾಗಿ, ನೀರವ್‌ ಮೋದಿಗೆ ಸಿಂ Ì ಕುಟುಂಬದ ಆರ್ಥಿಕ ವ್ಯವಹಾರಗಳ ನಂಟು ಇದೆ” ಎಂದು ಆರೋಪಿಸಿದ್ದರು. ಈ ಆರೋಪವನ್ನು ಸಿಂ Ì ಅಲ್ಲಗಳೆದಿದ್ದು, ನಿರ್ಮಲಾ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಇತರ ಕಾನೂನು ಕ್ರಮಗಳನ್ನು ಜರುಗಿಸಬ ಹುದಾಗಿದೆ ಎಂದು ಎಚ್ಚರಿಸಿದ್ದಾರೆ. 

ಪಿಎನ್‌ಬಿ ಅಲಹಾಬಾದ್‌ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನೇಶ್‌ ದುಬೆ ಎಂಬ ಅಧಿಕಾರಿ, 2013ರಲ್ಲೇ ಗೀತಾಂಜಲಿ ಕಂಪನಿಗೆ ಹೇರಳವಾಗಿ ಸಾಲ ನೀಡುತ್ತಿರುವ ಬಗ್ಗೆ ಅನುಮಾನಗೊಂಡು ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಸರಕಾರದ ಗಮನಕ್ಕೆ ತಂದಿದ್ದರು. ಆದರೆ, ಆನಂತರ ದುಬೆ ಅವರನ್ನು ಅವರಿದ್ದ ಹುದ್ದೆಯಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಯಿತು. ಇದಕ್ಕೆ ಯಾರು ಕಾರಣ ಎಂದೂ ನಿರ್ಮಲಾ ಪ್ರಶ್ನಿಸಿದ್ದಾರೆ. ಆಗ ಕಾಂಗ್ರೆಸ್‌ ಕ್ರಮ ಕೈಗೊಂಡಿರಲಿಲ್ಲ. ಆ ಕೆಲಸವನ್ನು ಈಗ ನಾವು (ಬಿಜೆಪಿ) ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಶುಕ್ರವಾರ, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ದುಬೆ, “”2013ರಲ್ಲೇ ಈ ಪ್ರಕರಣ ಯುಪಿಎ ಸರಕಾರದ ಗಮನಕ್ಕೆ ಬಂದಿತ್ತು. ಸರಕಾರ ಮನಸ್ಸು ಮಾಡಿದ್ದರೆ ಆಗಲೇ ಈ ಪ್ರಕರಣದ ಬೆಳವಣಿಗೆಯನ್ನು ತಡೆಯಬಹುದಿತ್ತು. ಆದರೆ, ಹಾಗಾಗಲಿಲ್ಲ” ಎಂದು ಆರೋಪಿಸಿದ್ದರು. 

ಕೋಲ್ಕತಾ ಶೋರೂಂ ಬಂದ್‌?ಪ್ರಕರಣದ ಮತ್ತೂಬ್ಬ ಆರೋಪಿ ಮೆಹುಲ್‌ ಚೋಕ್ಸಿ ಅವರ ಒಡೆತನದ ಗೀತಾಂಜಲಿ ಜ್ಯುವೆಲರ್ಸ್‌ನ ಕೋಲ್ಕತಾ ಶಾಖೆಯ ಮಳಿಗೆ ಮುಚ್ಚಲ್ಪಟ್ಟಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೋಲ್ಕತಾದ ಕ್ಯಾಮಕ್‌ ಸ್ಟ್ರೀಟ್‌ನಲ್ಲಿರುವ ಗೀತಾಂಜಲಿ ಜೆಮ್ಸ್‌ ಮಳಿಗೆಗೆ ಪರಿಶೀಲನೆಗೆ ತೆರಳಿದ್ದಾಗ, ಮಳಿಗೆ ಮುಚ್ಚಲ್ಪಟ್ಟಿತ್ತು. ಕಂಪನಿ ನಿಧಾನವಾಗಿ ತನ್ನ ಮಳಿಗೆಗಳನ್ನು ಮುಚ್ಚಿಸುತ್ತಿರುವುದರ ಅಂದಾಜಿದೆ ಎಂದು ಇ.ಡಿ.ಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಶಿವಸೇನೆ ಟೀಕೆ: ಹಗರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಿವಸೇನೆ, ನೀರವ್‌ ಅವರನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಮಾಡಬೇಕಿತ್ತು ಎಂದು ಲೇವಡಿ ಮಾಡಿದೆ. ಪಕ್ಷದ ಮುಖವಾಣಿಯಾದ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ನಾಯಕ ಉದ್ಧವ್‌ ಠಾಕ್ರೆ, “”ದಾವೋಸ್‌ ಶೃಂಗದಲ್ಲಿ ಪ್ರಧಾನಿ ಜತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ನೀರವ್‌, ವರ್ಷಗಳಿಂದ ಬಿಜೆಪಿ ಜತೆಗಿದ್ದು, ಬಿಜೆಪಿ ನಾಯಕರ ಕೃಪಾಕಟಾಕ್ಷ ಹೊಂದಿದ್ದು ಸ್ಪಷ್ಟವಾಗಿದೆ. ಇಂಥ ಅನೇಕ ನೀರವ್‌ಗಳಿಂದಲೇ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ” ಎಂದಿದ್ದಾರೆ. 

ಇದೇ ವೇಳೆ, ಹಗರಣವು ಈಗ ಅಂದುಕೊಂಡಿರುವ ಮೊತ್ತ 11,400 ಕೋಟಿ ರೂ.ಗಳಿಗೂ ಮೀರಲಿದೆ ಎಂದು ತೆರಿಗೆ ಇಲಾಖೆ ಹೇಳಿದ್ದು, ಪಿಎನ್‌ಬಿಯನ್ನು ನಂಬಿ ನೀರವ್‌ ಹಾಗೂ ಆತನ ಸಂಬಂಧಿಗಳ ಹೆಸರಿನಲ್ಲಿರುವ ಕಂಪನಿಗಳಿಗೆ ಭಾರತದ ಅನೇಕ ಬ್ಯಾಂಕುಗಳು ಸಾಲ ಅಥವಾ ಕಾರ್ಪೊರೇಟ್‌ ಖಾತ್ರಿ ನೀಡಿರುವುದು ಪತ್ತೆಯಾಗಿದ್ದು, ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಇದರ ಮೊತ್ತವೇ 17,600 ಕೋಟಿ ರೂ.ಗಳಿಗೆ ಮುಟ್ಟಲಿದೆ ಎಂದು ಇಲಾಖೆ ಹೇಳಿದೆ. ಇನ್ನೊಂದೆಡೆ, ನೀರವ್‌ ಮೋದಿ, ಸುಮಾರು 150 ನಕಲಿ ಕಂಪನಿಗಳನ್ನು ಸೃಷ್ಟಿಸಿ ಆ ಮೂಲಕ ಹಣಕಾಸು ಅವ್ಯವಹಾರ ಮಾಡಿರುವುದು ಪತ್ತೆಯಾ ಗಿದೆ ಎಂದು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಏನತ್ಮಧ್ಯೆ, ಭಾರತ ಮೂಲದ ನೀರವ್‌ ಮೋದಿ ಹಾಗೂ ಆತನ ಸಹೋದರ ನಿಶಾಲ್‌ ಮೋದಿ, ಬೆಲ್ಜಿಯಂನಲ್ಲೇ ಬೆಳೆದಿರುವುದರಿಂದ ಈ ಇಬ್ಬರೂ “ದ್ವಿ ಪೌರತ್ವ’ ಹೊಂದಿರ ಬಹುದೆಂದು ಮೂಲಗಳನ್ನು ಉಲ್ಲೇಖೀಸಿ ಟ್ರಿಬ್ಯೂನ್‌ ವರದಿ ಮಾಡಿದೆ. 

ಸಿಟಿ ಯೂನಿಯನ್‌ ಬ್ಯಾಂಕ್‌ನಲ್ಲೂ ಹಗರಣ 
ಪಿಎನ್‌ಬಿಯಲ್ಲಿ ನಡೆದಂತೆಯೇ ಸಿಟಿ ಯೂನಿಯನ್‌ ಬ್ಯಾಂಕ್‌ನ ಚೆನ್ನೈ ಶಾಖೆಯಲ್ಲೂ ಶನಿವಾರ ಇದೇ ರೀತಿಯ ಹಗರಣ ನಡೆದಿದ್ದು, ಸುಮಾರು 12.8 ಕೋಟಿ ರೂ. ಮೌಲ್ಯದ ಮೂರು ಅಕ್ರಮ ವಹಿವಾಟುಗಳು ನಡೆದಿರುವುದು ಪತ್ತೆಯಾಗಿದೆ. ಸಿಟಿ ಯುನಿಯನ್‌ ಬ್ಯಾಂಕ್‌ನ ಖಾತೆಯಲ್ಲಿ ಯಾವುದೇ ನಮೂದು ಮಾಡದೆಯೇ, ಸ್ವಿಫ್ಟ್ ಫೈನಾನ್ಷಿಯಲ್‌ ಸಿಸ್ಟಂನಲ್ಲಿ ಎಲ್‌ಒಯುಗಳನ್ನು ನಮೂದಿಸಲಾಗಿದೆ. ಫೆ.7ರಂದು ರಿಕನ್ಸಿಲಿಯೇಶನ್‌ ಪ್ರಕ್ರಿಯೆಯ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇತರ ಬ್ಯಾಂಕ್‌ಗೆ ತಕ್ಷಣವೇ ಸೂಚನೆ ನೀಡಲಾಗಿದೆ ಎಂದು ಸಿಟಿ ಯೂನಿಯನ್‌ ಬ್ಯಾಂಕ ಹೇಳಿದೆ.

ದೇಶದ ಕಾವಲುಗಾರ ಆಗಿರಬೇಕಾದ ಮೋದಿ, ನಿದ್ದೆ ಹೊಡೆಯುತ್ತಿದ್ದಾರೆ. ಕಳ್ಳ‌ರಿಗೆ ದೇಶವನ್ನು ಲೂಟಿ ಹೊಡೆಯಲು ಅನು ಕೂಲವಾಗುತ್ತಿದೆ. ಇದು ಮುಂದುವರಿದರೆ ದೇಶದ ಅಧಃಪತನ ನಿಶ್ಚಿತ.
ಕಪಿಲ್‌ ಸಿಬಲ್‌, ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.