CONNECT WITH US  

ಮಾಲೀಕನ ಪತ್ನಿಯೊಂದಿಗೆ ಪರಾರಿ:ಯುವಕನ ಕಣ್ಣುಗಳಿಗೆ ಆ್ಯಸಿಡ್‌!

ಬೆಗುಸರೈ (ಬಿಹಾರ): ಮಾಲೀಕನ ಪತ್ನಿಯೊಂದಿಗೆ ಪರಾರಿಯಾದ ಟ್ರ್ಯಾಕ್ಟರ್‌ ಡ್ರೈವರ್‌ನ ಕಣ್ಣಿಗೆ ಆ್ಯಸಿಡ್‌ನ‌ ಇಂಜೆಕ್ಷನ್‌ ಚುಚ್ಚಿ  ದುಷ್ಕೃತ್ಯ ಎಸಗಿದ ಭೀಕರ ಘಟನೆ ಶುಕ್ರವಾರ ಸಮಷ್ಟೀಪುರದ ಪಿಪ್ರಾ ಚೌಕ್‌ ಎಂಬಲ್ಲಿ  ನಡೆದಿದೆ.

ವರದಿಯಾದಂತೆ 30 ರ ಹರೆಯದ ಟ್ರ್ಯಾಕ್ಟರ್‌ ಚಾಲಕ ಮಾಲೀಕನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿ ಪರಾರಿಯಾಗಿದ್ದ. ಕೆಲ ದಿನಗಳಲ್ಲೇ ಮಾಲೀಕನ ಪತ್ನಿ ಮನೆಗೆ ಮರಳಿದ್ದಳು. ಆದರೆ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು ಚಾಲಕನ ವಿರುದ್ಧವೇ ಅಪಹರಣ ದೂರನ್ನು ಮಹಿಳೆಯ ಕಡೆಯವರು ನೀಡಿದ್ದರು.

ಇಷ್ಟಾದ ಬಳಿಕ ಹಗೆ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಮಹಿಳೆಯ ಸಂಬಂಧಿಕರು ಯುವಕನಿಗೆ ನಿನ್ನೊಂದಿಗೆಯೇ ಈಕೆ ಬದುಕಲು ಇಚ್ಛಿಸಿದ್ದಾಳೆ, ನೀನು ಠಾಣೆಗೆ ಬಾ, ಅಲ್ಲಿ ಮಾತುಕತೆ ಮಾಡುವ ಎಂದು ಕರೆಸಿಕೊಂಡಿದ್ದಾರೆ. 

ಆದರೆ ಠಾಣೆಯ 1 ಕೀ.ಮೀ ದೂರದಲ್ಲಿ ದಾಳಿ ನಡೆಸಿದ ಗುಂಪು ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಕಣ್ಣಿಗೆ ಆ್ಯಸಿಡ್‌ ತುಂಬಿದ ಇಂಜೆಕ್ಷನ್‌ ಚುಚ್ಚಿ  ಚರಂಡಿಗೆ ಎಸೆದು ಪರಾರಿಯಾಗಿದ್ದಾರೆ. 

ದಾರಿಹೋಕರೋರ್ವರು ಯುವಕನನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ. 

ಗಂಭೀರವಾಗಿ ಗಾಯಗೊಂಡಿರುವ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ. 

Trending videos

Back to Top