ಸಿಪಿಇಸಿ ಯೋಜನೆ ರಕ್ಷಣೆಗಾಗಿ ಬಲೂಚ್ ಉಗ್ರರ ಜತೆ ಚೀನ ಮಾತುಕತೆ
Team Udayavani, Feb 20, 2018, 11:04 AM IST
ಹೊಸದಿಲ್ಲಿ : ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಕಾಮಗಾರಿಗಳನ್ನು ರಕ್ಷಿಸುವ ಸಲುವಾಗಿ ಚೀನ ಬಲೂಚಿಸ್ಥಾನದಲ್ಲಿರುವ ಭಯೋತ್ಪಾದಕರ ಜತೆಗೆ ಮಾತುಕತೆ ನಡೆಸುತ್ತಿದೆ ಎಂಬ ಅಚ್ಚರಿಯ ವಿಷಯ ಇದೀಗ ಬಹಿರಂಗವಾಗಿದೆ.
ಪಿನಾನ್ಶಿಯಲ್ ಟೈಮ್ಸ್ ವರದಿ ಪ್ರಕಾರ ಚೀನ ಕಳೆದ ಐದು ವರ್ಷಗಳಿಂದಲೂ ಬಲೂಚಿಸ್ಥಾನದ ಉಗ್ರರೊಂದಿಗೆ ಮಾತುಕತೆ ನಡೆಸುತ್ತಿದ್ದು ತನ್ನ ಮಹತ್ವಾಕಾಂಕ್ಷೆಯ ಸಿಪಿಇಸಿ ಯೋಜನೆಯ ರಕ್ಷಣೆಗೆ ಕುಟಿಲೋಪಾಯ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ನೈಋತ್ಯ ಬಲೂಚಿಸ್ಥಾನದ ಭಾಗದಲ್ಲಿ ಚೀನದ ಸಿಪಿಇಸಿ ಯೋಜನೆಯ ಬಹು ಮುಖ್ಯ ಕಾಮಗಾರಿಗಳು ನಡೆಯಯುತ್ತಿದ್ದು ಅವುಗಳ ರಕ್ಷಣೆಗಾಗಿ ಚೀನ ಉಗ್ರರೊಂದಿಗೆ ನಡೆಸುತ್ತಿರುವ ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದು ಅನಾಮಿಕ ಪಾಕ್ ಅಧಿಕಾರಿಯೋರ್ವರನ್ನು ಉಲ್ಲೇಖೀಸಿ ಫಿನಾನ್ಶಿಯಲ್ ಟೈಮ್ಸ್ ವರದಿ ತಿಳಿಸಿದೆ.
ಹಾಗಿದ್ದರೂ ಎರಡು ತಿಂಗಳ ಹಿಂದಷ್ಟೇ ಚೀನ ಪಾಕಿಸ್ಥಾನದಲ್ಲಿರುವ ತನ್ನ ಪ್ರಜೆಗಳಿಗೆ ಸಿಪಿಇಸಿ ಯೋಜನೆಗಳ ಮೇಲೆ ಉಗ್ರರ ದಾಳಿ ನಡೆಸುವ ಸಾಧ್ಯತೆ ಇದ್ದು ಆ ಬಗ್ಗೆ ಎಚ್ಚರದಿಂದ ಇರುವಂತೆ ಸಲಹೆ ನೀಡಿತ್ತು. ಬಲೂಚಿಸ್ಥಾನದಲ್ಲಿ ಚೀನ 57 ಬಿಲಿಯ ಡಾಲರ್ ವೆಚ್ಚದಲ್ಲಿ ಸಿಪಿಇಸಿ ಕಾಮಗಾರಿಗಳನ್ನು ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್