CONNECT WITH US  

ಪ್ಯಾಂಪರ್ಸ್‌ ವಿರುದ್ಧ ಮುಸ್ಲಿಮರ ಆಕ್ರೋಶ

ಹೊಸದಿಲ್ಲಿ: ಪ್ಯಾಂಪರ್ಸ್‌ ಬ್ಲ್ಯಾಂಡ್‌ನ‌ ನ್ಯಾಪೀಸ್‌ನಲ್ಲಿ ಚಿತ್ರಿಸಲಾಗಿರುವ ಒಂದು ಬೆಕ್ಕಿನ ಕಾಟೂìನ್‌ಗೂ ಅರೇಬಿಕ್‌ನಲ್ಲಿ ಬರೆದ ಪ್ರವಾದಿ ಮಹಮ್ಮದರ ಹೆಸರಿಗೂ ಹೋಲಿಕೆಯಾಗುತ್ತಿದ್ದುದರಿಂದ ದೇಶದ ವಿವಿಧೆಡೆ ನ್ಯಾಪೀಸ್‌ಗಳನ್ನು ಸುಟ್ಟುಹಾಕಿ ಪ್ರತಿಭಟನೆ ನಡೆಸಲಾಗಿದೆ.

ನ್ಯಾಪೀಸ್‌ನಲ್ಲಿರುವ ಬೆಕ್ಕಿನ ಎಡ ಕಣ್ಣು, ಮೂಗು, ಬಾಯಿಯನ್ನು ಚಿತ್ರಿಸಿರುವುದಕ್ಕೆ ಅರೇಬಿಕ್‌ನಲ್ಲಿ ಪ್ರವಾದಿ ಮಹಮ್ಮದರ ಹೆಸರಿನ ಹೋಲಿಕೆಯಿದೆ. ಇದು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನ ಎಂದು ಟೀಕಿಸಲಾಗಿದೆ. ಈ ಮಧ್ಯೆ ಪ್ಯಾಂಪರ್ಸ್‌ ನ್ಯಾಪೀಸ್‌ ತಯಾರಿಸುವ ಪ್ರಾಕ್ಟರ್‌ ಆಂಡ್‌ ಗ್ಯಾಂಬಲ್‌ ಪ್ರತಿಕ್ರಿಯೆ ನೀಡಿ, ಯಾವುದೇ ವ್ಯಕ್ತಿ ಅಥವಾ ಧರ್ಮವನ್ನು ಅವಹೇಳನ ಮಾಡುವ ಉದ್ದೇಶವನ್ನು ಹೊಂದಿಲ್ಲ. ಇದು ಒಂದು ಸಾಮಾನ್ಯ ಬೆಕ್ಕಿನ ಚಿತ್ರವಷ್ಟೇ ಎಂದು ಸ್ಪಷ್ಟನೆ ನೀಡಿದೆ.
 


Trending videos

Back to Top