ಜಿಗ್ನೇಶ್ಗೆ ಎನ್ಕೌಂಟರ್ ಭೀತಿ
Team Udayavani, Feb 25, 2018, 7:30 AM IST
ಹೊಸದಿಲ್ಲಿ: ಗುಜರಾತ್ನ ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರು “ಎಡಿಆರ್ ಪೊಲೀಸ್ ಆ್ಯಂಡ್ ಮೀಡಿಯಾ’ ಎಂಬ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಎನ್ಕೌಂಟರ್ಗಳ ಬಗ್ಗೆ ನಡೆಸಿರುವ ಮಾತುಕತೆ ಹಿನ್ನೆಲೆಯಲ್ಲಿ, ಗುಜರಾತ್ನ ವಡ್ಗಾಂ ಶಾಸಕ ಜಿಗ್ನೇಶ್ ಮೆವಾನಿ ತಮ್ಮ ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ನಲ್ಲಿರುವ ಅಹ್ಮದಾಬಾದ್ ಡಿವೈಎಸ್ಪಿ (ಗ್ರಾಮೀಣ), ಉತ್ತರ ಪ್ರದೇಶದಲ್ಲಿ ನಡೆದ ಸರಣಿ ಎನ್ಕೌಂಟರ್ಗಳಿಗೆ ಸಂಬಂಧಿಸಿ ಸಿಎಂ ಯೋಗಿ ಆದಿತ್ಯನಾಥ್ ನೀಡಿರುವ ಪ್ರತಿಕ್ರಿಯೆ ಹಾಗೂ ರಾಜಕಾರಣಿಯಂತೆ ಕಾಣುವ ವ್ಯಕ್ತಿಯೊಬ್ಬ ನನ್ನು ಪೊಲೀಸರು ಹೊಡೆಯುತ್ತಿರುವ ಎರಡು ವೀಡಿಯೋಗಳನ್ನು ಹಾಕಿ, ಅದರ ಕೆಳಗೆ, “”ಪೊಲೀಸರಿಗೆ “ಇದು ನಿಮ್ಮಪ್ಪನ ಆಸ್ತಿಯಾ’ ಎಂದು ಕೇಳುವವರಿಗೆ ಹಾಗೂ ಪೊಲೀಸರನ್ನು “ಲಾಖೋಟ’ಗಳೆಂದು ಕರೆಯುವವರಿಗೆ ಇದೇ ದುರ್ಗತಿ (ಎನ್ಕೌಂಟರ್) ಬರುತ್ತದೆೆ” ಎಂದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇವಾನಿ, “ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರು ನನ್ನ ಎನ್ಕೌಂಟರ್ ಹೇಗೆ ಮಾಡಬಹುದೆಂಬುದರ ಬಗ್ಗೆ ಚರ್ಚಿಸಿದ್ದಾರೆ. ನೀವಿದನ್ನು ನಂಬುತ್ತೀರಾ?’ ಎಂದು ಪ್ರಶ್ನಿಸಿ, ಆ ಮಾತುಕತೆಯ ಲಿಂಕ್ ಅನ್ನೂ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ, ಮೇವಾನಿ ಅವರನ್ನು ಬಂಧಿಸಿದ್ದ ಪೊಲೀಸರು, ಕಾರಿನ ಕೀಗಳನ್ನು ಒಡೆದು ಪುಡಿ ಮಾಡಿದ್ದರು. ಆಗ, ಮೇವಾನಿ, “”ಇದು ನಿಮ್ಮಪ್ಪನ ಆಸ್ತಿ ಎಂದುಕೊಂಡಿದ್ದೀರಾ’ ಎಂದು ಕೂಗಿದ್ದರಲ್ಲದೆ, ಪೊಲೀಸರನ್ನು “ಲೋಖಾಟಾ’ ಎಂದು ಬೈಯ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ