CONNECT WITH US  

ಟೇಕಾಫ್ ವೇಳೆ ಕೆಸಿಆರ್‌ ಹೆಲಿಕಾಪ್ಟರ್‌ ಸಂಪರ್ಕ ಸಾಧನದಲ್ಲಿ ಹೊಗೆ

ಹೈದರಾಬಾದ್‌ : ಕರೀಂನಗರ ಜಿಲ್ಲೆಯಿಂದ ಹಾರಲಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಅವರ ಹೆಲಿಕಾಪ್ಟರ್‌ನಲ್ಲಿನ ಸಂಪರ್ಕ ಸಾಧನವೊಂದರಿಂದ ಹೊಗೆ ಹೊರಬರುತ್ತಿದ್ದುದನ್ನು ಕೊನೇ ಕ್ಷಣದಲ್ಲಿ  ಪತ್ತೆ ಹಚ್ಚಲಾಯಿತೆಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಬೆಳಗ್ಗೆ 10.30ರ ಹೊತ್ತಿಗೆ ಹೆಲಿಕಾಪ್ಟರ್‌ ಟೇಕಾಫ್ ಆಗುವ ಹೊತ್ತಿಗೆ ಸರಿಯಾಗಿ ಸಂಪರ್ಕ ಸಾಧನದಲ್ಲಿ ಹೊಗೆ ಹೊರಬರುತ್ತಿದ್ದುದು ಪತ್ತೆಯಾಯಿತು. ತತ್‌ಕ್ಷಣವೇ ಸಂಪರ್ಕ ಸಾಧನವನ್ನು ಕಳಚಲಾಯಿತು ಎಂದವರು ಹೇಳಿದ್ದಾರೆ. 

ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲಿದ್ದ ಸಿಎಂ ರಾವ್‌ ಮತ್ತು ಇತರರು ಸುರಕ್ಷಿತರಾಗಿದ್ದು ಅವರು ತಮ್ಮ ಪ್ರಯಾಣವನ್ನು ಆ ಬಳಿಕ ಮುಂದುವರಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ. 

Trending videos

Back to Top