ತ್ರಿಪುರ: ಬಿಜೆಪಿ 33 ಸ್ಥಾನಗಳಲ್ಲಿ ಮುಂದೆ, CPM 26ರಲ್ಲಿ ಮುಂದೆ
Team Udayavani, Mar 3, 2018, 10:53 AM IST
ಹೊಸದಿಲ್ಲಿ : ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು ಈಗ 10.50ರ ಹೊತ್ತಿಗೆ ದೊರಕಿರುವ ಟ್ರೆಂಡ್ ಪ್ರಕಾರ 59 ಸ್ಥಾನಬಲದ ತ್ರಿಪುರದಲ್ಲಿ ಬಿಜೆಪಿ 31 ಸ್ಥಾನಗಳಿಂದ ಮುಂದಿದೆ.
ಬಿಜೆಪಿಗೆ ಕತ್ತು ಕತ್ತಿನ ಸ್ಪರ್ಧೆ ನೀಡುತ್ತಿರುವ ಸಿಪಿಎಂ 26 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಮುಂದಿದೆ. ಸಿಪಿಐ ಮತ್ತು ಇತರರು ಇನ್ನೂ ಖಾತೆ ತೆರೆದಿಲ್ಲ.
59 ಸದಸ್ಯ ಬಲದ ಮೇಘಾಲಯ ವಿಧಾನಸಭೆಯ 48 ಸ್ಥಾನಗಳ ಟ್ರೆಂಡ್ ದೊರಕಿದ್ದು ಆ ಪೈಕಿ ಕಾಂಗ್ರೆಸ್ 21 ಸ್ಥಾನಗಳಲ್ಲಿ ಮುಂದಿದೆ; ಅನಂತರದ ಸ್ಥಾನದಲ್ಲಿ ಎನ್ಪಿಪಿ 14 ಸ್ಥಾನಗಳಲ್ಲಿ ಮುಂದಿದೆ. ಮೂರನೇ ಸ್ಥಾನದಲ್ಲಿರುವ ಬಿಜೆಪಿ ಆರು ಸ್ಥಾನಗಳಲ್ಲಿ ಮುಂದಿದೆ. ಇತರರು 4 ಸ್ಥಾನಗಳಲ್ಲಿ ಮುಂದಿದ್ದಾರೆ.
ನಾಗಾಲ್ಯಾಂಡ್ನ 60 ಸ್ಥಾನಗಳಲ್ಲಿ 51 ಸ್ಥಾನಗಳ ಟ್ರೆಂಡ್ ಗೊತ್ತಾಗಿದ್ದು ಇಲ್ಲಿ ಎನ್ಪಿಎಫ್ 26 ಸ್ಥಾನಗಳಲ್ಲಿ ಮುಂದಿದೆ; ಬಿಜೆಪಿ 21 ಸ್ಥಾನಗಳಲ್ಲಿ ಮುಂದಿದೆ; ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಮುಂದಿದೆ; ಇತರರು 2 ಸ್ಥಾನಗಳಲ್ಲಿ ಮುಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ