ಸನ್ನಿ ಲಿಯೋನ್ ದಂಪತಿಗೆ ಅವಳಿ ಗಂಡು ಮಕ್ಕಳು
Team Udayavani, Mar 6, 2018, 8:15 AM IST
ಮುಂಬಯಿ: ನಟಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ದಾಂಪತ್ಯಕ್ಕೆ ಅವಳಿ ಮಕ್ಕಳ ಉಡುಗೊರೆ ಸಿಕ್ಕಿದೆ. ನವಜಾತರು ಗಂಡುಮಕ್ಕಳಾಗಿದ್ದು ಇವರಿಗೆ ಆಶೆರ್ ಹಾಗೂ ನೊವಾ ಎಂಬ ಹೆಸರನ್ನಿಡಲಾಗಿದೆ. ಬಾಡಿಗೆ ತಾಯ್ತನದ ಮೂಲಕ ಈ ಮಕ್ಕಳನ್ನು ದಂಪತಿ ಪಡೆದಿದ್ದಾರೆ. ಕಳೆದ ವರ್ಷ, ಹೆಣ್ಣು ಮಗುವೊಂದನ್ನು ಇವರು ದತ್ತು ಪಡೆದಿದ್ದರು. ಮೂರೂ ಮಕ್ಕಳೊಂದಿಗಿನ ತಮ್ಮ ಫೋಟೋವೊಂದನ್ನು ನಟಿ ತಮ್ಮ ಇನ್ಸ್ಟಾrಗ್ರಾಂನಲ್ಲಿ ಹಾಕಿದ್ದು, ದೇವರು ನಮ್ಮ ಕುಟುಂಬಕ್ಕೆ ದೇವತೆಯಂಥ ಬಾಡಿಗೆ ತಾಯಿಯ ಮೂಲಕ ಎರಡು ಮುದ್ದಾದ ಮಕ್ಕಳನ್ನು ನೀಡಿದ್ದಾನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್