CONNECT WITH US  

ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಉ.ಪ್ರ. ಮಹಿಳೆ, ಪುತ್ರಿ

ಕಾನ್ಪುರ : ಅಸ್ಥಿ ಮಜ್ಜೆ ದುರ್ಬಲಗೊಂಡು ದೇಹವು ನಿಶ್ಚೇಷ್ಟಿತವಾಗಿ ಇದ್ದಲ್ಲೇ ಬಿದ್ದಿರುವ ಕಾಯಿಲೆಯಿಂದ ನರಳುತ್ತಿರುವ, ಉತ್ತರ ಪ್ರದೇಶದ ಕಾನ್ಪುರದವರಾದ,  59 ವರ್ಷ ಪ್ರಾಯದ ಶಶಿ ಮಿಶ್ರಾ ಮತ್ತು ಆಕೆಯ 33 ವರ್ಷ ಪ್ರಾಯದ ಪುತ್ರಿ ಅನಾಮಿಕಾ ಮಿಶ್ರಾ ಅವರು ತಮಗೆ ಪರೋಕ್ಷ ದಯಾ ಮರಣವನ್ನು  ದಯಪಾಲಿಸಬೇಕೆಂದು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದು ಬೇಡಿಕೊಂಡಿದ್ದಾರೆ. 

ಸಿಟಿ ಮ್ಯಾಜಿಸ್ಟ್ರೇಟ್‌ ರಾಜ ನಾರಾಯಣ ಪಾಂಡೆ ಅವರು, ತಾಯಿ - ಮಗಳ ಈ ಪತ್ರವನ್ನು  ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. 

ಅನಾಮಿಕಾ ಮಿಶ್ರಾ ಅವರು, ತಾನು ಹಾಗೂ ತನ್ನ ತಾಯಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್‌ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೂ ಪತ್ರ ಬರೆದು ತಮಗೆ ಪರೋಕ್ಷ ದಯಾಮರಣವನ್ನು ಕರುಣಿಸಬೇಕೆಂದು ಪತ್ರ ಬರೆದಿರುವುದಾಗಿ ಹೇಳಿದ್ದಾರೆ. 

ಈ ತಾಯಿ - ಮಗಳು ಮಸ್‌ಕ್ಯುಲರ್‌ ಡಿಸ್‌ಟ್ರೋಫಿ ಎಂಬ ಅಸ್ಥಿಮಜ್ಜೆ ಕಾಯಿಲೆಯಿಂದ ಬಳಲುತ್ತಿದ್ದು ಹಾಸಿಗೆಯಿಂದ ಏಳಲಾರದ, ಚಲಿಸಲಾರದ ಸ್ಥಿತಿಯಲ್ಲಿ ವರ್ಷಾನುಗಟ್ಟೆಲೆಯಿಂದ ಇದ್ದಾರೆ. ಇದು ಆನುವಂಶಿಕ ಕಾಯಿಲೆಯಾಗಿದ್ದು ತನ್ನ ತಂದೆ 15 ವರ್ಷಗಳ ಹಿಂದೆ ಮೃತಪಟ್ಟಿದ್ದರೆ ಎಂದು ಅನಾಮಿಕಾ ಮಿಶ್ರ ತಿಳಿಸಿದ್ದಾರೆ. 

Trending videos

Back to Top