CONNECT WITH US  

ರಕ್ತದ ಮೇಲೆ ರಾಜಕೀಯ

ಕೇಂದ್ರ ಸರ್ಕಾರ, ವಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ

ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ನಲ್ಲಿ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದರು.

ನವದೆಹಲಿ: ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಕಾಯ್ದೆಯ ನಿಯಮಗಳ ಸಡಿಲಿಕೆಯನ್ನು ಖಂಡಿಸಿ ದೇಶಾದ್ಯಂತ ದಲಿತ ಸಂಘಟನೆಗಳು ನಡೆಸಿದ ಭಾರತ್‌ ಬಂದ್‌ ಹಿಂಸಾಚಾರಕ್ಕೆ ತಿರುಗಿ, ಏಳು ಜನರು ಸತ್ತು, ಅಪಾರ ನಷ್ಟಕ್ಕೆ  ಉಂಟಾಗಿದೆ. ಇದರ ನಡುವೆಯೇ ರಾಜಕೀಯ ನಾಯಕರ ನಡುವೆ ತೀವ್ರ ಮಾತಿನ ಸಮರವೂ ನಡೆದಿದೆ. 

ಒಂದೆಡೆ, ಬಿಎಸ್‌ಪಿ ನಾಯಕಿ ಮಾಯಾವತಿ ಅವರು ದಲಿತರ ಪ್ರತಿಭಟನೆ, ಹಿಂಸಾಚಾರದ ಆರೋಪವನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸಿದ್ದು, ಕೇಂದ್ರ ಸರ್ಕಾರವು ಸರಿಯಾದ ಸಮಯಕ್ಕೆ ಸುಪ್ರೀಂ ಕೋರ್ಟ್‌ಗೆ ತೀರ್ಪಿನ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ ಯಾವುದೇ ಪ್ರತಿಭಟನೆಯಾಗಲೀ, ಭಾರತ್‌ ಬಂದ್‌ ಆಗಲೀ ನಡೆಯುತ್ತಿರಲಿಲ್ಲ. ಸರ್ಕಾರವು ವಿಳಂಬ ಧೋರಣೆ ಅನುಸರಿಸಿತು ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಬಂದ್‌ಗೆ ಬೆಂಬಲ ಸೂಚಿಸಿದ್ದರೆ, ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು ರಾಹುಲ್‌ ವಿರುದ್ಧ ಕಿಡಿಕಾರಿದ್ದು, ದಲಿತರ ಪರ ಮಾತನಾಡಲು ರಾಹುಲ್‌ಗೆ ನೈತಿಕ ಹಕ್ಕಿಲ್ಲ ಎಂದಿದ್ದಾರೆ.

ಬಿಜೆಪಿ ದಲಿತ ವಿರೋಧಿ: ಮಾಯಾ ದಲಿತರ ಹಿತಾಸಕ್ತಿಗಾಗಿ ನಾನು ಭಾರತ್‌ ಬಂದ್‌ ಅನ್ನು ಬೆಂಬಲಿಸುತ್ತೇನೆ. ಆದರೆ, ಹಿಂಸಾಚಾರವನ್ನು ಬೆಂಬಲಿಸಲ್ಲ ಎಂದಿರುವ ಮಾಯಾವತಿ, ಬಿಜೆಪಿ ದಲಿತ ವಿರೋಧಿ ಧೋರಣೆ ಹೊಂದಿದ್ದು, ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದುಳಿದವರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ, ದಲಿತರನ್ನು ಕತ್ತಲ ಕೂಪಕ್ಕೆ ತಳ್ಳಲಾಗುತ್ತಿದೆ, ಉದ್ಯೋಗಗಳಲ್ಲಿ ಬಡ್ತಿಯನ್ನೂ ನೀಡಲಾಗುತ್ತಿಲ್ಲ ಎಂದೂ ಮಾಯಾ ಹೇಳಿದ್ದಾರೆ. ಜತೆಗೆ, ನಾವು ಸಂಸತ್‌ನಲ್ಲಿ ಇರದಿದ್ದರೂ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧದ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರವನ್ನು ಮಂಡಿಯೂರಿಸುತ್ತೇವೆ ಎಂದೂ ಹೇಳಿದ್ದಾರೆ.

ಹಿಂಸಾಚಾರಕ್ಕೆ ಸರ್ಕಾರ ಕಾರಣ: ಕಾಂಗ್ರೆಸ್‌
ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದು, ಹಿಂಸಾಚಾರಕ್ಕೆ ಸರ್ಕಾರವೇ ಕಾರಣ ಎಂದಿದೆ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜ ನ್ಯ ಗಳು ಅವ್ಯಾಹತವಾಗಿ ನಡೆಯುತ್ತಿವೆ. ಬಂದ್‌ಗೆ ನಾವು ಸುಪ್ರೀಂ ಕೋರ್ಟ್‌ ಅನ್ನು ಹೊಣೆಯಾಗಿಸುವುದಿಲ್ಲ. ಕೇಂದ್ರ ಸರ್ಕಾ ರವು ಎಸ್‌ಸಿ/ಎಸ್‌ಟಿ ವಿಚಾರದಲ್ಲಿ ಸರಿ ಯಾಗಿ ವಾದ ಮಂಡಿಸದ ಕಾರಣ ಇಂಥ ತೀರ್ಪು ಹೊರಬಿದ್ದಿದೆ. ಸರ್ಕಾರವು ಈ ಪ್ರಕರಣವನ್ನು ಅತ್ಯಂತ ಹಗುರವಾಗಿ ಪರಿ ಗಣಿಸಿತು ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಗುಲಾಂ ನಬಿ ಆಜಾದ್‌ ಆರೋಪಿಸಿದ್ದಾರೆ.

ಮೋದಿ ಸರ್ಕಾರದಿಂದ ತಮ್ಮ ಹಕ್ಕುಗಳ ರಕ್ಷಣೆ ಕೋರಿ ನಮ್ಮ ದಲಿತ ಸೋದರರು, ಸೋದರಿಯರು ಬೀದಿಗಿಳಿದಿದ್ದಾರೆ.  ದಲಿತರು ಕೆಳಮಟ್ಟದಲ್ಲೇ ಇರಬೇಕು ಎಂಬ ಧೋರಣೆ ಬಿಜೆಪಿ, ಆರೆಸ್ಸೆಸ್‌ ಡಿಎನ್‌ಎಯಲ್ಲೇ ಇದೆ.
ರಾಹುಲ್‌ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಪ.ಜಾ/ಪ.ಪಂ ಕಾಯ್ದೆಯನ್ನು ಕಠಿಣ ರೂಪದಲ್ಲಿ ಜಾರಿಗೊಳಿಸಬೇಕು ಎಂಬುದು ಸಂಘ ಪರಿವಾರದ ನಿಲುವು. ಆದರೆ,   ಪ್ರತಿಭಟನೆಯ ವೇಳೆ ಸಂಘ ಪರಿವಾರದ ವಿರುದ್ಧ ದುರುದ್ದೇಶದಿಂದ ಕ್ಯಾಂಪೇನ್‌ ನಡೆಸಲಾಗುತ್ತಿದೆ.
ಸುರೇಶ ಭಯ್ನಾಜಿ ಜೋಶಿ, ಆರೆಸ್ಸೆಸ್‌ ಸರಕಾರ್ಯವಾಹ

ಬಿಜೆಪಿ ಟೀಕಿಸುವ ನೈತಿಕ ಹಕ್ಕು ರಾಹುಲ್‌ಗಿಲ್ಲ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ದಲಿತರಿಗಾಗಲೀ, ಅಂಬೇಡ್ಕರ್‌ಗಾಗಲೀ ಏನೂ ಮಾಡಿಲ್ಲ. ಹಾಲಿ ಸರ್ಕಾರ ದಲಿತರ ಏಳಿಗೆಗಾಗಿ ಸಾಕಷ್ಟು ಯೋಜನೆ ರೂಪಿಸಿದೆ.
ರಾಮ್‌ ವಿಲಾಸ್‌ ಪಾಸ್ವಾನ್‌, ಕೇಂದ್ರ ಸಚಿವ

Trending videos

Back to Top