CONNECT WITH US  

ನಾಳೆ ಇಸ್ರೋ ಸಂವಹನ ಸ್ಯಾಟಲೈಟ್‌ಉಡಾವಣೆ

ಚೆನ್ನೈ: ನ್ಯಾವಿಗೇಶನ್‌ ಸ್ಯಾಟಲೈಟ್‌ ಸರಣಿ ಐ.ಆರ್‌.ಎನ್‌.ಎಸ್‌.ಎಸ್‌.-1ಎ ಗೆ ಪರ್ಯಾಯ ಉಪಗ್ರಹವನ್ನು ಉಡಾವಣೆ ಮಾಡುವ ಎರಡನೇ ಪ್ರಯತ್ನವನ್ನು ಇಸ್ರೋ ಏಪ್ರಿಲ್‌ 12 ರಂದು ನಡೆಸಲಿದೆ. ಈ ಹಿಂದೆ ಕಳೆದ ವರ್ಷ ಸಂವಹನ ಉಪಗ್ರಹ ಉಡಾವಣೆ ಮಾಡಲಾಗಿತ್ತಾದರೂ, ಇದರ ರುಬಿಡಿಯಂ ಕ್ಲಾಕ್‌ ವಿಫ‌ಲವಾಗಿತ್ತು. ಶ್ರೀಹರಿಕೋಟಾದಿಂದ ಗುರುವಾರ ಬೆಳಗಿನ ಜಾವ 4.04 ಗಂಟೆಗೆ ಉಡಾವಣೆ ಮಾಡಲಾಗುತ್ತದೆ. ಇದು ಯಶಸ್ವಿಯಾದಲ್ಲಿ ಕೇರಳ ಮತ್ತು ತಮಿಳುನಾಡು ಮೀನುಗಾರರಿಗೆ ಹವಾಮಾನ ಹಾಗೂ ಮೀನುಗಾರಿಕೆ ವಲಯದ ಬಗ್ಗೆ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ಎರಡು ವಾರಗಳ ಹಿಂದಷ್ಟೇ ಜಿಸ್ಯಾಟ್‌ 6ಎ ಉಡಾವಣೆ ಮಾಡಲಾಗಿತ್ತು. ಇದು ಯಶಸ್ವಿಯಾಗಿ ಕಕ್ಷೆ ತಲುಪಿದ್ದರೂ, ಎರಡು ದಿನಗಳ ನಂತರ ನಿಯಂತ್ರಣ ಕೇಂದ್ರದ ಸಂವಹನ ಕಳೆದುಕೊಂಡಿತ್ತು.

Trending videos

Back to Top