CONNECT WITH US  

ನೋಟು ಅಮಾನ್ಯ ಮಾಹಿತಿ ಇತ್ತು: ರಘುರಾಮ್‌ ರಾಜನ್‌

ನ್ಯೂಯಾರ್ಕ್‌: "ಅಪನಗದೀಕರಣ'ದ ತೀರ್ಮಾನ ಪೂರ್ವ ತಯಾರಿ ಇಲ್ಲದೆಯೇ ಜಾರಿಗೊಂಡ ಒಂದು ತಪ್ಪು ನಿರ್ಧಾರ ಎಂದು ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ನೋಟು ಅಮಾನ್ಯ ನಿರ್ಧಾರಕ್ಕೂ ಮುನ್ನ ಆರ್‌ಬಿಐ ಅಭಿಪ್ರಾಯವನ್ನು ಕೇಂದ್ರ ಕೇಳಿರಲಿಲ್ಲ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು. ತಾವು ಆರ್‌ಬಿಐ ಗವರ್ನರ್‌ ಆಗಿದ್ದಾಗಲೇ ಚರ್ಚೆಯಾಗಿತ್ತು. ಆದರೆ, ಆಗ ತಾವು ಈ ಆಲೋಚನೆಯನ್ನು ನಿರಾಕರಿಸಿದ್ದಾಗಿ ತಿಳಿಸಿದ್ದಾರೆ.

ಕೇಂಬ್ರಿಡ್ಜ್ನ ಹಾರ್ವರ್ಡ್‌ ಕೆನಡಿ ಸ್ಕೂಲ್‌ನಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯಿಕರಣದಿಂದಾಗಿ ಶೇ. 87.5ರಷ್ಟು ನೋಟುಗಳು ರದ್ದಿಯಾದವು. ಇಂಥ ನಿರ್ಧಾರವನ್ನು ಯಾವುದೇ ಹಣಕಾಸು ತಜ್ಞ ಒಪ್ಪುವುದಿಲ್ಲ ಎಂದರು.

Trending videos

Back to Top