CONNECT WITH US  

ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳ ಖುಲಾಸೆ

ಹೈದರಾಬಾದ್:2007ರಲ್ಲಿ ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿದ್ದ ಸ್ವಾಮೀ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. 

ನಭಕುಮಾರ್ ಸರ್ಕಾರ್ ಅಲಿಯಾಸ್ ಸ್ವಾಮೀ ಅಸೀಮಾನಂದ, ದೇವೇಂದರ್ ಗುಪ್ತಾ, ಲೋಕೇಶ್ ಶರ್ಮಾ ಅಲಿಯಾಸ್ ಅಜಯ್ ತಿವಾರಿ, ಲಕ್ಷ್ಮಣ್ ದಾಸ್ ಮಹಾರಾಜ್, ಮೋಹನಲಾಲ್ ರಥೇಶ್ವರ, ಹಾಗೂ ರಾಜೇಂದರ್ ಚೌದರಿ,ಈ ಐವರನ್ನು ಪ್ರಕರಣದ ಆರೋಪಿಗಳೆಂದು ಬಂಧಿಸಲಾಗಿತ್ತು. 

2007 ಮೇ, 18ರ ಶುಕ್ರವಾರದಂದು ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ದಾಳಿ ನಡೆದಿತ್ತು ಆ ಸಂದರ್ಭ ಒಂಬತ್ತು ಮಂದಿ ಪ್ರಾಣಕಳೆದುಕೊಂಡಿದ್ದರು ಜೊತೆಗೆ 58ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಸಂದರ್ಭ ವಿಶೇಷ ತನಿಖಾ ತಂಡ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು, 2011ರಲ್ಲಿ ಈ ಐದು ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.  

ನ್ಯಾಯಾಲಯವು ಸರಿಯಾದ ಸಾಕ್ಷ ಆಧಾರಗಳಿಲ್ಲದೆ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. 

Trending videos

Back to Top