ಮಹಿಳೆಯರ ರಕ್ಷಣೆಗೆ ಪ್ರಧಾನಿ ಮೋದಿ ಗಮನ ಹರಿಸಬೇಕು: IMF
Team Udayavani, Apr 20, 2018, 4:19 PM IST
ಹೊಸದಿಲ್ಲಿ : ದೇಶಾದ್ಯಂತ ಈಚೆಗೆ ವ್ಯಾಪಕ ಖಂಡನೆ ಮತ್ತು ಆಕ್ರೋಶಕ್ಕೆ ಗುರಿಯಾಗಿರುವ ಉನ್ನಾವೋ ಮತ್ತು ಕಥುವಾ ಗ್ಯಾಂಗ್ ರೇಪ್ ಹಿನ್ನೆಲೆಯಲ್ಲಿ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡ್ ಅವರು “ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿನ ಮಹಿಳೆಯರು ಮತ್ತು ಮಕ್ಕಳ ಸುರಕ್ಷೆ ಮತ್ತು ಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ” ಎಂದು ಹೇಳಿದ್ದಾರೆ.
ಹಾಗಿದ್ದರೂ ಭಾರತ ಸಾಧಿಸಿರುವ ಗಮನಾರ್ಹ ಆರ್ಥಿಕ ನಿರ್ವಹಣೆಯನ್ನು ಪ್ರಶಂಸಿಸಿರುವ ಲಗಾರ್ಡ್ ಅವರು, “ಉನ್ನಾವೋ ಮತ್ತು ಕಥುವಾದಲ್ಲಿ ಆಗಿರುವುದು ಬಂಡಾಯವೇ ಹೊರತು ಬೇರೇನೂ ಅಲ್ಲ’ ಎಂದು ಪ್ರತಿಕ್ರಿಸಿದರು.
“ಭಾರತೀಯ ಮಹಿಳೆಯರಿಗೆ ಸುರಕ್ಷೆ ಮತ್ತು ಭದ್ರತೆಯನ್ನು ಒದಗಿಸುವ ಅಗತ್ಯವಿದೆ. ಆದುದರಿಂದ ಪ್ರಧಾನಿ ಮೋದಿ ಅವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು” ಎಂದು ಲಗಾರ್ಡ್ ಹೇಳಿದರು.