ಸನ್ಯಾಸಿಯಾದ ಶ್ರೀಮಂತ
Team Udayavani, Apr 22, 2018, 6:00 AM IST
ಅಹ್ಮದಾಬಾದ್: ಶುಕ್ರವಾರವಷ್ಟೇ, ಸೂರತ್ನ ವಜ್ರ ವ್ಯಾಪಾರಿಯೊಬ್ಬರ 12 ವರ್ಷದ ಪುತ್ರ ಭವ್ಯ ಶಾ ಎಂಬಾತ ತನ್ನ ಐಶಾರಾಮಿ ಜೀವನ ತ್ಯಜಿಸಿ ಜೈನ ಸನ್ವಾಸತ್ವ ಸ್ವೀಕರಿಸಿದ ಬೆನ್ನಿಗೇ, ಇದೀಗ ಮುಂಬೈನ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಶ್ರೀಮಂತ ಮನೆತನದ, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ 24 ವರ್ಷದ ಮೋಕ್ಷೇಶ್ ಸೇಠ್ ಎಂಬ ಯುವಕ ಕೂಡ ತನ್ನ ಭೋಗ, ಭಾಗ್ಯಗಳನ್ನು ತೊರೆದು ಜೈನ ಸನ್ಯಾಸ ಲೋಕಕ್ಕೆ ಅಡಿಯಿಟ್ಟಿದ್ದಾರೆ.
ಮೋಕ್ಷೇಶ್ ಅವರ ಕುಟುಂಬ ಮುಂಬೈನಲ್ಲಿ ಅಂದಾಜು 100 ಕೋಟಿ ರೂ. ಮೌಲ್ಯದ ಅಲ್ಯೂಮಿನಿಯಂ ವಹಿವಾಟು ಕಂಪನಿ ಹೊಂದಿದೆ. ಮೋಕ್ಷೇಶ್ ತಂದೆ ಸಂದೀಪ್ ಸಿಂಗ್ ಅವರೇ ಕಂಪನಿ ನಡೆಸುತ್ತಿದ್ದಾರೆ. ಮೋಕ್ಷೇಶ್, ಸಂದೀಪ್ ಅವರ ಜೇಷ್ಠ ಪುತ್ರ. ಕೆಲ ವರ್ಷಗಳ ಹಿಂದಷ್ಟೇ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸಾದ ಮೋಕ್ಷೇಶ್, ಇತ್ತೀಚಿನವರೆಗೂ ಕಂಪನಿಯ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದ. ನಂತರ ಜೈನ ಸಿದ್ಧಾಂತಗಳಿಗೆ ಮಾರು ಹೋಗಿ, ಐಶಾರಾಮಿ ಜೀವನ ತ್ಯಜಿಸಲು ನಿರ್ಧರಿಸಿದ್ದಾರೆ. ಶುಕ್ರವಾರ, ಸನ್ಯಾಸತ್ವ ಸ್ವೀಕರಿಸಿರುವ ಅವರು ಇನ್ನು, “ಕರುಣಾ ಪ್ರೇಮ್ ವಿಜಯ್ ಜೀ’ ಎಂದು ಸಂಬೋಧಿಸಲ್ಪಡುತ್ತಾರೆಂದು ಅವರ ಸಂಬಂಧಿ ಗಿರೀಶ್ ಸೇಠ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್