CONNECT WITH US  

ಜಿಸ್ಯಾಟ್‌ 11 ಉಡಾವಣೆ ಮುಂದೂಡಿದ ಇಸ್ರೋ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸಂವಹನಕ್ಕೆ ಸಹಕಾರಿಯಾದ ಅತ್ಯಾಧುನಿಕ ತಂತ್ರಜ್ಞಾನದ, ಮಹತ್ವಾಕಾಂಕ್ಷೆಯ ಉಪಗ್ರಹ ಜಿಸ್ಯಾಟ್‌-11 ಉಡಾವಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ತಾಂತ್ರಿಕ ಕಾರಣಗಳಿಂದ ಮುಂದೂಡಿದೆ.

ಈ ಮುಂದೂಡಿಕೆಗೆ ಮಾ.29ರಂದು ಉಡಾವಣೆಯಾಗಿದ್ದ ಜಿಸ್ಯಾಟ್‌-6ಎ ಸಂಪರ್ಕ ಕಳೆದುಕೊಂಡದ್ದೂ ಕಾರಣ ಎನ್ನಲಾಗಿದೆ. ಆದರೆ  ಇಸ್ರೋ, ಇದಕ್ಕೆ ನಿರ್ದಿಷ್ಟವಾದ ಕಾರಣ ಏನೆಂದು ಹೇಳಿಲ್ಲ. ತನ್ನ ಪ್ರಕಟಣೆಯಲ್ಲಿ ತಾಂತ್ರಿಕ ಕಾರಣ ಎಂದಷ್ಟೇ ಹೇಳಿದ್ದು, ಬದಲಾದ ದಿನಾಂಕವನ್ನು  ಸದ್ಯದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ. ಪೂರ್ವ ನಿರ್ಧಾರದಂತೆ, ಮೇ.25ರಂದು ಏರಿಯನ್‌ ಸ್ಪೇಸ್‌ ರಾಕೆಟ್‌ ಮೂಲಕ ಗಯಾನಾದ ಕೌರೊ ಕೇಂದ್ರದಿಂದ ಜಿಸ್ಯಾಟ್‌-11 ಉಡಾವಣೆ ಆಗಬೇಕಿತ್ತು.  

Trending videos

Back to Top