ಎಟಿಎಂ, ಚೆಕ್, ಕಾರ್ಡ್ ವ್ಯವಹಾರಕ್ಕೂ ತೆರಿಗೆ ಬರೆ?
Team Udayavani, Apr 26, 2018, 6:00 AM IST
ಹೊಸದಿಲ್ಲಿ: ಈಗ ಉಚಿತವಾಗಿರುವ ಎಟಿಎಂ, ಚೆಕ್, ವ್ಯವಹಾರದ ಮೇಲೆ ಇನ್ನು ಸೇವಾಶುಲ್ಕ ವಿಧಿಸುವ ಸಾಧ್ಯತೆ ಇದೆ. ಸದ್ಯ ಕನಿಷ್ಠ ಬ್ಯಾಲೆನ್ಸ್ ಹೊಂದಿದ ಖಾತೆದಾರರಿಗೆ ಬ್ಯಾಂಕ್ಗಳು ಚೆಕ್ಬುಕ್, ಎಟಿಎಂ ವಿತ್ಡ್ರಾವಲ್, ಕಾರ್ಡ್ಗಳು ಇನ್ನಿತರ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ. ಹಾಗೆಯೇ ಕನಿಷ್ಠ ಬ್ಯಾಲೆನ್ಸ್ ಹೊಂದಿಲ್ಲದವರಿಗೆ ದಂಡ ವಿಧಿಸುತ್ತಿವೆ. ಆದರೆ ತೆರಿಗೆ ಇಲಾಖೆಯ ಹೊಸ ಕಾನೂನುಗಳ ಪ್ರಕಾರ ಈಗ ಉಚಿತವಾಗಿರುವವುಗಳನ್ನು ಪರಿಗಣಿತ ಸೇವೆ ಎಂದು ತೆರಿಗೆ ವಿಧಿಸಲು ಅವಕಾಶವಿದೆ. ಆದ್ದರಿಂದ ಉಚಿತ ಸೇವೆಗಳ ಹೆಸರಲ್ಲಿ ಕೋಟಿ ಗಟ್ಟಲೆ ರೂಪಾಯಿ ವ್ಯವಹಾರ ನಡೆಸುತ್ತಿರುವುದಕ್ಕೆ ಯಾಕಾಗಿ ತೆರಿಗೆ ಕಟ್ಟಿಲ್ಲ ಎಂದು ತೆರಿಗೆ ಇಲಾಖೆ ಬ್ಯಾಂಕ್ಗಳಿಗೆ ಪ್ರಶ್ನೆ ಮಾಡಿದೆ.
ಈ ಬಗ್ಗೆ ಅದು ಪ್ರಮುಖ ಬ್ಯಾಂಕ್ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ಗಳಿಗೆ ಶೋಕಾಸ್ ನೋಟಿಸು ಜಾರಿ ಮಾಡಿದ್ದು, ಕಳೆದ ಐದು ವರ್ಷಗಳಿಂದ ಅನ್ವಯವಾಗುವಂತೆ ತೆರಿಗೆ ಕಟ್ಟುವಂತೆ ಹೇಳಿದೆ. ಇದರ ಪ್ರಮಾಣ ಸುಮಾರು 6 ಸಾವಿರ ಕೋಟಿ ರೂ. ಎಂದು ಹೇಳಲಾಗಿದೆ. ಒಂದು ವೇಳೆ ತೆರಿಗೆ ಕಟ್ಟಬೇಕೆಂದೇ ಆದಲ್ಲಿ, ಬ್ಯಾಂಕ್ಗಳು ತಮ್ಮ ಮೇಲೆ ಬೀಳುವ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಮುಂದೆ ಪ್ರತಿ ಬ್ಯಾಂಕ್ ವ್ಯವಹಾರಕ್ಕೂ ಸೇವಾ ಶುಲ್ಕವನ್ನು ಗ್ರಾಹಕರು ಕಟ್ಟಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ