CONNECT WITH US  

ಮಕ್ಕಳ ತಪ್ಪಿಗೆ ಪೋಷಕರು ಜೈಲಿಗೆ

ಸಾಂದರ್ಭಿಕ ಚಿತ್ರ

ಹೈದರಾಬಾದ್‌: ಮಕ್ಕಳು ತಾವು ಮಾಡಿದ ತಪ್ಪಿಗೆ ಹೆತ್ತವರನ್ನು ಕಂಬಿ ಎಣಿಸುವಂಥ ಪರಿಸ್ಥಿತಿಗೆ ಒಡ್ಡಿದ್ದಾರೆ. ಕಳೆದ 2 ತಿಂಗಳ ಅವಧಿಯಲ್ಲಿ ಹೈದರಾಬಾದ್‌ನ ಟ್ರಾಫಿಕ್‌ ಪೊಲೀಸರ ಕಾರ್ಯಾಚರಣೆಯಿಂದ ಒಟ್ಟು 26 ಪೋಷಕರು ಜೈಲು ಸೇರಿದ್ದಾರೆ. ಅನೇಕ ಅಪಘಾತ ಪ್ರಕರಣಗಳಲ್ಲಿ ಮಕ್ಕಳೇ ವಾಹನ ಚಲಾಯಿಸುತ್ತಿದ್ದುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಾಫಿಕ್‌ ಜಂಟಿ ಪೊಲೀಸ್‌ ಆಯುಕ್ತ ಅನಿಲ್‌ ಕುಮಾರ್‌, ""ಮಾರ್ಚ್‌ ತಿಂಗಳಲ್ಲಿ ಅಪ್ರಾಪ್ತರು ಭಾಗಿಯಾಗಿರುವ ಪ್ರಕರಣಗಳಲ್ಲಿ 20 ಮಂದಿ ಪೋಷಕರನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದೇವೆ. ಏಪ್ರಿಲ್‌ನಲ್ಲಿ 6 ಪೋಷಕರು ಬಂಧಿಸಿದ್ದೇವೆ'' ಎಂದಿದ್ದಾರೆ.

ಇಂಥ ಪ್ರಕರಣದಲ್ಲಿ ಬಂಧಿಸಲಾಗುವ ಅಪ್ರಾಪ್ತರನ್ನೂ ಒಂದು ತಿಂಗಳು ಜೈಲಿಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ನಿರಂತರವಾಗಿ ಜನತೆಗೆ ಸಂದೇಶ ರವಾನಿಸುತ್ತಿದ್ದೇವೆ. ಅಪ್ರಾಪ್ತರಿಂದ ವಾಹನ ಚಾಲನೆ ಅವರಿಗಷ್ಟೇ ಅಲ್ಲ, ಬೇರೆಯವರೂ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ ಅನಿಲ್‌ ಕುಮಾರ್‌.


Trending videos

Back to Top