CONNECT WITH US  

ಬಿಜೆಪಿಗೆ ಸಲಹೆ; ಗವರ್ನರ್‌ ವಿವಾದ  

ಸತ್ನಾ: "ಜನರ ಆಶೋತ್ತರಗಳಿಗೆ ಸ್ಪಂದಿಸದೇ, ಹೇಗೆ ತಾನೇ ಮತ ಯಾಚಿಸುತ್ತೀರಿ? ಮತ ಬೇಕೆಂದರೆ ಬಡ ಹಾಗೂ ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ' ಎಂದು ಕಾರ್ಯಕರ್ತರ ಸಮ್ಮುಖದಲ್ಲೇ ಬಿಜೆಪಿ ಮುಖಂಡರಿಗೆ ಮಧ್ಯಪ್ರದೇಶ ರಾಜ್ಯ ಪಾಲರಾದ ಆನಂದಿಬೆನ್‌ ಪಟೇಲ್‌ ಸಲಹೆ ನೀಡಿರುವ ವಿಡಿಯೋ ಒಂದು  ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆನಂದಿಬೆನ್‌ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದು ಒಂದು ಪಕ್ಷದ ಪರವಾಗಿ ಮಾತನಾಡಿದ್ದು,  ಕೂಡಲೇ ಗೌರವಾನ್ವಿತ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಜತೆಗೆ, ರಾಷ್ಟ್ರಪತಿಗೆ ಈ ಬಗ್ಗೆ ದೂರು ನೀಡುವುದಾಗಿಯೂ ಹೇಳಿದೆ.

ಚಿತ್ರಕೂಟಕ್ಕೆ ಭೇಟಿ ನೀಡಿದ್ದಾಗ ಆನಂದಿಬೆನ್‌ ಹೀಗೆ ಹೇಳಿಕೆ ನೀಡಿದ್ದರು. 


Trending videos

Back to Top