ಪತ್ರಕರ್ತನ ವಿರುದ್ಧ ಕಪಿಲ್ ಕೇಸು
Team Udayavani, May 3, 2018, 6:00 AM IST
ಮುಂಬೈ: ಕಿರುತೆರೆ ನಿರೂಪಕ ಕಪಿಲ್ ಶರ್ಮಾ ವೆಬ್ಸೈಟ್ ಒಂದರ ಪತ್ರಕರ್ತ 100 ಕೋಟಿ ರೂ.ಮೊತ್ತದಷ್ಟು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜತೆಗೆ ಮಾನಹಾನಿಕಾರಕವಾಗಿರುವ ಅಂಶಗಳನ್ನು ಪ್ರಕಟಿಸಿದ್ದಕ್ಕಾಗಿ ಪತ್ರಕರ್ತ ವಿಕ್ಕಿ ಲಾಲ್ವಾನಿ ಬೇಷರತ್ ಆಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ದಾವೆ ಹೂಡಿರುವುದಾಗಿ ಕಪಿಲ್ ಶರ್ಮಾ ಪರ ವಕೀಲರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾಲ್ವಾನಿ ತಮಗಿನ್ನೂ ನೋಟಿಸ್ ತಲುಪಿಲ್ಲ ಎಂದು ಹೇಳಿದ್ದಾರೆ. 2017ರ ಮಾ.18ರಿಂದ ವೆಬ್ಸೈಟ್ ಒಂದರಲ್ಲಿ ಶರ್ಮಾ ವಿರುದ್ಧ ಮಾನಿಹಾರಕ ಅಂಶಗಳನ್ನು ಪ್ರಕಟಿಸಲಾಗುತ್ತಿದೆ ಕಪಿಲ್ ಶರ್ಮಾ ಪರ ವಕೀಲರು ಹೇಳಿದ್ದಾರೆ.