ಇನ್ನೂ ಮೂರು ಬಾರಿ ಮೋದಿ, ಕ್ಸಿ ಭೇಟಿ
Team Udayavani, May 5, 2018, 6:00 AM IST
ನವದೆಹಲಿ: ಇತ್ತೀಚೆಗಷ್ಟೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ವರ್ಷದಲ್ಲಿ ಇನ್ನೂ ಮೂರು ಬಾರಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಲುವೋ ಝೌಹುಯಿ ಹೇಳಿದ್ದಾರೆ. ಚೀನಾ, ದಕ್ಷಿಣ ಆಫ್ರಿಕಾ ಮತ್ತು ಅರ್ಜೆಂಟೀನಾ ಪ್ರವಾಸದ ವೇಳೆ ಉಭಯ ನಾಯಕರು ಭೇಟಿಯಾಗಲಿದ್ದಾರೆ ಎಂದಿದ್ದಾರೆ.