CONNECT WITH US  

ಟ್ರಕ್‌ ಡ್ರೈವ್‌ ಮಾಡಿ ಸೇತುವೆ ಉದ್ಘಾಟಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ಮಾಸ್ಕೋ: ಉಕ್ರೇನ್‌ನ ಪ್ರಬಲ ವಿರೋಧದ ಹೊರತಾಗಿಯೂ ರಷ್ಯಾದ ದಕ್ಷಿಣ ಪ್ರದೇಶ ಮತ್ತು ಉಕ್ರೇನ್‌
ರಾಜಧಾನಿ ಕ್ರೀಮಾವನ್ನು ಸಂಪರ್ಕಿಸುವ 19 ಕಿಮೀ ದೂರದ ಸೇತುವೆಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌
ಉದ್ಘಾಟಿಸಿದ್ದಾರೆ.

ಹಲವಾರು ಕಾರ್ಮಿಕರು ಇರುವ ಟ್ರಕ್‌ ಅನ್ನು ಪುಟಿನ್‌ ಅವರೇ ಚಲಾಯಿಸಿಕೊಂಡು ಬಂದಿದ್ದಾರೆ. ರಷ್ಯಾದ ಸರ್ಕಾರಿ ಟಿವಿ ಚಾನೆಲ್‌ ವರದಿ ಮಾಡಿರುವ ಪ್ರಕಾರ ಜೀನ್ಸ್‌ ಮತ್ತು ಜಾಕೆಟ್‌ ಧರಿಸಿದ್ದ ಪುಟಿನ್‌ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿರು ವವರನ್ನು ಉಕ್ರೇನ್‌ಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದರು.

ಪುಟಿನ್‌ರ ಕ್ರಮದ ಬಗ್ಗೆ ಉಕ್ರೇನ್‌ ಗಂಭೀರವಾಗಿಯೇ ಪ್ರತಿಕ್ರಿಯೆ ನೀಡಿ ಖಂಡಿಸಿದೆ. ಅಂತಾರಾಷ್ಟ್ರೀಯ
ಸಮುದಾಯ ರಷ್ಯಾದಿಂದ ಬೇರ್ಪಟ್ಟ ಪ್ರದೇಶವನ್ನು ಪ್ರತ್ಯೇಕವೆಂದು ಮಾನ್ಯ ಮಾಡಿಲ್ಲ. ಅಲ್ಲಿ ರಷ್ಯಾ ಸರ್ಕಾರ
ಕೈಗೊಂಡಿರುವ ಕಾಮಗಾರಿ ನಿಯಮದ ಉಲ್ಲಂಘನೆ ಎಂದು ಅಲ್ಲಿನ ಪ್ರಧಾನಿ ವೊಲೊಡಿಮಿರ್‌ ಗ್ರಾಸಿಮನ್‌
ಪ್ರತಿಪಾದಿಸಿದ್ದಾರೆ. 2014ರಲ್ಲಿ ರಷ್ಯಾದಿಂದ ಕ್ರಿಮಾ ಬೇರ್ಪಟ್ಟಿತ್ತು. ಈ ಸೇತುವೆ ಯುರೋಪ್‌ನ ಲಿಸºನ್‌
ನಲ್ಲಿರುವ ವಾಸ್ಕೋ ಡ ಗಾಮಾ ಸೇತುವ ಗಿತ ಉದ್ದವಾಗಿದೆ.


Trending videos

Back to Top