CONNECT WITH US  

ಸಲ್ಮಾನ್‌ ವಿವಾದಿತ ಹೇಳಿಕೆ

ಮುಂಬಯಿ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯದಿಂದ ತಮ್ಮ ವಿರುದ್ಧ ತೀರ್ಪಿಗೆ ಸಂಬಂಧಿಸಿ ದಂತೆ, ಸಮಾರಂಭವೊಂದರಲ್ಲಿ ಸಲ್ಮಾನ್‌ ಖಾನ್‌ ನೀಡಿದ ಉತ್ತರವೊಂದು ವಿವಾದಕ್ಕೆ ಕಾರಣವಾಗಿದೆ.

ಮಂಗಳವಾರ, ಅವರ ಅಭಿನಯದ "ರೇಸ್‌ 3' ಪ್ರಚಾರ ಸಮಾರಂಭದಲ್ಲಿ ಪತ್ರಕರ್ತರೊಬ್ಬರು, "ತೀರ್ಪು ಬಂದಾಗ ನೀವು ಒತ್ತಡಕ್ಕೊಳಗಾಗಿದ್ದಿರಾ?' ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಸಲ್ಲು "ನೀವೇ ನಂದು ಕೊಂಡಿದ್ರಿ? ನಾನು ಶಾಶ್ವತವಾಗಿ ಜೈಲಿಗೆ ಹೋಗ್ತಿàನಿ ಅಂದೊಂಡಿದ್ರಾ?' ಎಂದು ಮರು ಪ್ರಶ್ನೆ ಎಸೆದಿದ್ದರು.  ಅವರ ಈ ಹೇಳಿಕೆಗೆ ಟ್ವಿಟರ್‌ ಮಂದಿ, "ನಮ್ಮಲ್ಲಿ ಕೋಟ್ಯ ಧೀಶರನ್ನು ನ್ಯಾಯಾಲಯ, ಪೊಲೀಸರು ಕೂಡ ಏನೂ ಮಾಡಲ್ಲ' ಎಂಬರ್ಥದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Trending videos

Back to Top