ನಿರಂಕುಶ ಪ್ರಭುತ್ವ: ರಾಹುಲ್‌


Team Udayavani, May 18, 2018, 5:05 AM IST

rahul-18-5.jpg

ಹೊಸದಿಲ್ಲಿ / ರಾಯ್‌ಪುರ: ಬಹುಮತ ಇಲ್ಲದಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಭಯದ ವಾತಾವಾರಣ ನಿರ್ಮಾಣವಾಗಿದೆ. ಪಾಕಿಸ್ಥಾನ ಮತ್ತು ಆಫ್ರಿಕಾ ಖಂಡಗಳಲ್ಲಿನ ನಿರಂಕುಶ ಪ್ರಭುತ್ವವನ್ನು ನೆನಪಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಾಂಗ, ಮಾಧ್ಯಮ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ನಿಯಂತ್ರಣದಲ್ಲಿ ಇರಿಸುವ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

ರಾಯ್‌ಪುರದಲ್ಲಿ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯ ಸ್ವರ್ಣ ಮಹೋತ್ಸವ ಆಚರಣೆ ಹಿನ್ನೆಯಲ್ಲಿ ನಡೆದ ಜನ ಸ್ವರಾಜ್‌ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್‌ ‘ದೇಶದಲ್ಲಿ ಸಂವಿಧಾನದ ಮೇಲೆ ದಾಳಿಯಾಗುತ್ತಿದೆ. ಕರ್ನಾಟಕದಲ್ಲಿ ಶಾಸಕರು ಒಂದೆಡೆ ರಾಜ್ಯಪಾಲರು ಮತ್ತೂಂದೆಡೆ ಎನ್ನುವಂತಾಗಿದೆ. ಜೆಡಿಎಸ್‌ ನಾಯಕ (ಕುಮಾರ ಸ್ವಾಮಿ) ತನ್ನ ಪಕ್ಷದ ನಾಯಕರಿಗೆ 100 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂದು ಹೇಳುತ್ತಿದ್ದಾರೆ’ ಎಂದರು.

ಪ್ರಜಾಪ್ರಭುತ್ವ ಸೋತುಹೋಗಿದ್ದಕ್ಕೆ ದೇಶ ದುಃಖೀಸಲಿದೆ ಎಂದು ಹೇಳಿದ ರಾಹುಲ್‌, ದೇಶದ ಪ್ರಮುಖ ಹುದ್ದೆಗಳಿಗೆ ಬಿಜೆಪಿ ಮತ್ತು ಆರ್‌.ಎಸ್‌.ಎಸ್‌. ತಮ್ಮವರನ್ನೇ ನೇಮಿಸಿದೆ. ಇದು ಪಾಕಿಸ್ಥಾನ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿರುವ ನಿರಂಕುಶ ಪ್ರಭುತ್ವ ನೆನಪಿಸುತ್ತಿದೆ. ನ್ಯಾಯಕ್ಕಾಗಿ ಜನರು ಸುಪ್ರೀಂಕೋರ್ಟ್‌ಗೆ  ಹೋಗುತ್ತಾರೆ. ಆದರೆ 70 ವರ್ಷಗಳಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿಗಳೇ  ನಮ್ಮ ಕೆಲಸವನ್ನು ಮಾಡಲು ಬಿಡುತ್ತಿಲ್ಲ ಎಂದು ಜನರ ಬಳಿಗೆ ಹೋಗುವಂತಾಗಿದೆ. ಇಂತಹ ಸಂಗತಿಗಳು ಸಾಮಾನ್ಯವಾಗಿ ಸರ್ವಾಧಿಕಾರಿ ಆಡಳಿತದಲ್ಲಿ ನಡೆಯುತ್ತದೆ. ಪಾಕಿಸ್ಥಾನ ಹಾಗೂ ಆಫ್ರಿಕಾದಲ್ಲಿ ಹೀಗಾಗಿದೆ. 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಹೀಗಾಗುತ್ತಿದೆ ಎಂದಿದ್ದಾರೆ. 

ಒಂದು ದಿನದ ಸಿಎಂ: ಇದೇ ವೇಳೆ ಗುರುವಾರ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಯಡಿಯೂರಪ್ಪ ಶುಕ್ರವಾರದ ವೇಳೆ ಮಾಜಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ. ಕರ್ನಾಟಕ ರಾಜ್ಯಪಾಲರ ನಿರ್ಧಾರ ಖಂಡಿಸಿ ಹೊಸದಿಲ್ಲಿ ಸೇರಿದಂತೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪಕ್ಷ ಪ್ರತಿಭಟನೆ ನಡೆಸಲಿದೆ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ ಘೋಷಿಸಿದ್ದಾರೆ. ಬಹುಮತ ಇಲ್ಲದೇ ಇರುವಾಗ ರಾಜ್ಯಪಾಲರು ಹೇಗೆ ಯಡಿಯೂರಪ್ಪ ಅವರನ್ನು ಸರಕಾರ ರಚನೆಗೆ ಆಹ್ವಾನಿಸಿದ್ದಾರೆ ಎಂದು ಪ್ರಶ್ನಿಸಿದರು. ಮೋದಿ ಮತ್ತು ಅಮಿತ್‌ ಶಾ ಅವರಿಗೆ ನೈತಿಕ ಧೈರ್ಯವಿದ್ದರೆ, ಸಂವಿಧಾನದಲ್ಲಿ ನಂಬಿಕೆ ಇದ್ದರೆ ಶುಕ್ರವಾರದ ಒಳಗಾಗಿ ಕರ್ನಾಟಕದಲ್ಲಿ ಬಹುಮತ ಸಾಬೀತು ಮಾಡಿ ಎಂದು ಸುರ್ಜೆವಾಲಾ ಸವಾಲು ಹಾಕಿದ್ದಾರೆ.

ಗೋವಾ, ಬಿಹಾರದಲ್ಲಿ ಹಕ್ಕು ಮಂಡನೆ!
ಕರ್ನಾಟಕದಲ್ಲಿ ಸರಕಾರ ರಚಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಕ್ಕು ಮಂಡಿಸಿದ ರೀತಿಯಲ್ಲೇ ಗೋವಾದಲ್ಲಿ ಅಲ್ಲಿನ ಕಾಂಗ್ರೆಸ್‌ ನಾಯಕ ಚಂದ್ರಕಾಂತ್‌ ಕವೆÉàಕರ್‌ ಸರಕಾರ ರಚನೆಗೆ ಹಕ್ಕು ಮಂಡಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಶನಿವಾರ ರಾಜ್ಯಪಾಲ ಮೃದುಲಾ ಸಿನ್ಹಾರನ್ನು ಭೇಟಿ ಆಗಲು ನಿರ್ಧರಿಸಿದ್ದಾರೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 16, ಬಿಜೆಪಿ 14, ಎಂಜಿಪಿ 3, ಗೋವಾ ಫಾರ್ವರ್ಡ್‌ ಪಾರ್ಟಿ 3, ಎನ್‌ಸಿಪಿ 1, ಸ್ವತಂತ್ರ 3 ಸ್ಥಾನ ಗೆದ್ದಿದ್ದಾರೆ. ‘ಕರ್ನಾಟಕದ ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸಿದ್ದಾರೆ. ಗೋವಾ ರಾಜ್ಯಪಾಲರೂ ಅದನ್ನು ಅನುಸರಿಸಬೇಕು” ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ಗೆ 21 ಶಾಸಕರ ಬೆಂಬಲ ಬೇಕಲ್ಲವೇ ಎಂದು ಪ್ರಶ್ನಿಸಿದಾಗ “ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.

ಇನ್ನೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಕೂಡ ಸರಕಾರ ರಚನೆಗೆ ಅವಕಾಶ ನೀಡಬೇಕೆಂದು ಹಕ್ಕು ಮಂಡಿಸಲಿದೆ ಎಂದು ಆರ್‌.ಜೆ.ಡಿ. ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ. ಆರ್‌ಜೆಡಿ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿದ್ದು, 243 ಸ್ಥಾನಗಳ ವಿಧಾನಸಭೆಯಲ್ಲಿ 80 ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಜೆಡಿಯು, ಬಿಜೆಪಿ  131 ಸ್ಥಾನ ಹೊಂದಿವೆ. ಏತನ್ಮಧ್ಯೆ, ದೇಶಾದ್ಯಂತ ಕಾಂಗ್ರೆಸ್‌ ಶುಕ್ರವಾರ ಪ್ರತಿಭಟನೆ ನಡೆಸಲಿದೆ.

ಜೆ.ಡಿ.ಎಸ್‌.ಗೆ ಕೈ ಬೆಂಬಲಿಸಿದಾಗಲೇ ಪ್ರಜಾಪ್ರಭುತ್ವದ ಹತ್ಯೆ: ಅಮಿತ್‌ ಶಾ

ರಾಜಕೀಯ ಲಾಭಕ್ಕಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ರಚನೆ ಮಾಡಲು ಜೆ.ಡಿ.ಎಸ್‌.ಗೆ ಬೆಂಬಲಿಸಿದಾಗಲೇ ದೇಶದಲ್ಲಿ ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಕರ್ನಾಟಕದಲ್ಲಿ ಸರಕಾರ ರಚನೆ ಮಾಡಲು ಯಾರಿಗೆ ಜನರು ಬೆಂಬಲ ನೀಡಿದ್ದಾರೆ? 104 ಸೀಟುಗಳನ್ನು ಗಳಿಸಿದ ಬಿಜೆಪಿಗೋ ಅಥವಾ 78 ಸ್ಥಾನಕ್ಕೆ ಕುಸಿದ ಕಾಂಗ್ರೆಸ್ಸಿಗೋ ಎಂದು ಅವರು ಕೇಳಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ 16 ಸಚಿವರು ಚುನಾವಣೆಯಲ್ಲಿ ಸೋತು ಹೋಗಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಕೇವಲ 37 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಇನ್ನು ಬಹುತೇಕ ಕಡೆ ಇಡುಗಂಟನ್ನೂ ಕಳೆದುಕೊಂಡಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಶಾ ಟ್ವೀಟ್‌ ಮಾಡಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರಿಗೆ ಶುಭಾಶಯ. ಭ್ರಷ್ಟ ಹಾಗೂ ದುರಾಡಳಿತ ನೀಡಿದ ಕಾಂಗ್ರೆಸ್‌ ಕಿತ್ತೂಗೆಯಲು ಮತ ಹಾಕಿದ ಪ್ರತಿಯೊಬ್ಬ ಕನ್ನಡಿಗನ ಜಯವಿದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಜ್ಯದ ಬಿಜೆಪಿ ಸರಕಾರವು ಜನರ ಆಶೋತ್ತರಗಳನ್ನು ಪೂರೈಸಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಬರೆದುಕೊಂಡಿದ್ದಾರೆ.

ಹಳೆಯ ಟ್ವೀಟ್‌ ನೆನಪಿಸಿದ ಕಾಂಗ್ರೆಸ್‌
ರಾಜಕೀಯ ಬಿಕ್ಕಟ್ಟಿನ ಮಧ್ಯದಲ್ಲೇ 2011ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್‌ ಒಂದನ್ನು ಕಾಂಗ್ರೆಸ್‌ ಈಗ ಪ್ರಸ್ತಾವಿಸಿದೆ. 2011ರಲ್ಲಿ ಕರ್ನಾಟಕದಲ್ಲಿ ಎಚ್‌.ಆರ್‌. ಭಾರದ್ವಾಜ್‌ ರಾಜ್ಯಪಾಲರಾಗಿದ್ದ ವೇಳೆ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಆಗ ಟ್ವೀಟ್‌ ಮಾಡಿದ್ದ ಮೋದಿ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯಪಾಲರು ನಾಶಗೊಳಿಸುತ್ತಿದ್ದಾರೆ. ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗೆ ಪ್ರಧಾನಿ ಸೂಚಿಸಬೇಕು ಎಂದಿದ್ದರು. ಇದೀಗ ಕರ್ನಾಟಕದ ಹಾಲಿ ರಾಜ್ಯಪಾಲರನ್ನೂ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತಿದೆ ಎಂದು ಹೇಳಿದೆ.

ಕರ್ನಾಟಕ ರಾಜ್ಯಪಾಲರ ನಡೆ, ಸಂವಿಧಾನ ಶಿಲ್ಪಿ 
ಡಾ. ಅಂಬೇಡ್ಕರ್‌ ವಿರಚಿತ ಸಂವಿಧಾನವನ್ನು ವಿಧ್ವಂಸ ಮಾಡುವ ಕುತಂತ್ರದಿಂದ ಕೂಡಿದೆ.  ಕರ್ನಾಟಕದಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಸರಕಾರವೇ ರಚನೆಯಾಗಬೇಕೆಂಬ ಮಾಯಾವತಿಯವರ  ಆಗ್ರಹವನ್ನು ಬೆಂಬಲಿಸುತ್ತೇನೆ.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ

ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ರಾಜ್ಯಪಾಲರು ಸಂವಿಧಾನದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಶಾಸಕರನ್ನು ಖರೀದಿಸಲು, ಕುದುರೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡುವ ನಿರ್ಧಾರವನ್ನು ರಾಜ್ಯಪಾಲರು ನೀಡಿದ್ದು ಅಚ್ಚರಿಯದ್ದಾಗಿದೆ. ಆರೆಸ್ಸೆಸ್‌ ಗವರ್ನರ್‌ ರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
– ಕ್ಯಾ| ಅಮರಿಂದರ್‌ ಸಿಂಗ್‌, ಪಂಜಾಬ್‌ ಸಿಎಂ

ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿದ ಪತ್ರದ ಮೇಲೆ ಅವರ ಭವಿಷ್ಯ ನಿಂತಿದೆ. 104ಕ್ಕಿಂತ ಹೆಚ್ಚು ಶಾಸಕರ ಬೆಂಬಲವಿದೆ ಎಂಬ ಉಲ್ಲೇಖ ಆ ಪತ್ರದಲ್ಲಿಲ್ಲ. ರಾಜ್ಯಪಾಲರ ಆಹ್ವಾನದಲ್ಲಿ ಶಾಸಕರ ಬೆಂಬಲದ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಒಂದು ವೇಳೆ ನಾನು ಯಡಿಯೂರಪ್ಪ ಆಗಿದ್ದಿದ್ದರೆ,  ಮೇ 18ರ 10.30 ಕ್ಕಿಂತ ಮೊದಲು ಪ್ರಮಾಣ ವಚನ ಸ್ವೀಕರಿಸುತ್ತಲೇ ಇರಲಿಲ್ಲ.
– ಪಿ.ಚಿದಂಬರಂ, ಮಾಜಿ ಸಚಿವ

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

arrested

Salman Khan ನಿವಾಸಕ್ಕೆ ಫೈರಿಂಗ್‌: ಶಂಕಿತ ಇಬ್ಬರ ಬಂಧನ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.