CONNECT WITH US  

ಮಧ್ಯ ಪ್ರದೇಶ: ಗುಂಡೆಸೆದುಕೊಂಡು ಪೊಲೀಸ್‌ ಕಾನ್‌ಸ್ಟೆಬಲ್‌ ಆತ್ಮಹತ್ಯೆ

ದಾತಿಯಾ, ಮಧ್ಯ ಪ್ರದೇಶ : ದಾತಿಯಾ ಜಿಲ್ಲೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ 40 ವರ್ಷದ ಪೊಲೀಸ್‌ ಕಾನ್‌ಸ್ಟೆಬಲ್‌ ತಮ್ಮ ಸರ್ವಿಸ್‌ ರೈಫ‌ಲ್‌ನಿಂದ ಗುಂಡೆಸೆದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಕಾನ್‌ಸ್ಟೆಬಲ್‌ ಕಿಶನ್‌ ಸಿಂಗ್‌ ಅವರು ಇಂದು ಶನಿವಾರ ಮಧ್ಯಾಹ್ನ 12.30ರ ಹೊತ್ತಿಗೆ ತಮ್ಮ ಸರ್ವಿಸ್‌ ರೈಫ‌ಲ್‌ನಿಂದ ಗುಂಡೆಸೆದುಕೊಂಡರು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಮಯಾಂಕ್‌ ಅವಸ್ಥಿ ತಿಳಿಸಿದರು. 

ಸಿಂಗ್‌ ಅವರು ವಿಶೇಷ ಸಶಸ್ತ್ರ ದಳದ ಕಾರ್ಯಾಲಯದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದ. ಗುಂಡೆಸೆದುಕೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.

Trending videos

Back to Top