ಮೋದಿ v/s ಮೋದಿ ಹಠಾವೋ ಯುದ್ಧ


Team Udayavani, May 27, 2018, 6:00 AM IST

9.jpg

ಹೊಸದಿಲ್ಲಿ: “”2019ರ ಮಹಾ ಚುನಾವಣೆ, “ಮೋದಿ ಹಾಗೂ ಮೋದಿ ಹಠಾವೊ’ ಎಂಬ ಅಜೆಂಡಾಗಳ ನಡುವಿನ ಧರ್ಮ ಯುದ್ಧ”. ಇದು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಬಗ್ಗೆ ರಾಜಕೀಯ ಚಾಣಕ್ಯನೆಂದೇ ಖ್ಯಾತಿಗಳಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಒಂದು ಸಾಲಿನ ವಿಶ್ಲೇಷಣೆ. ಕೇಂದ್ರದಲ್ಲಿ ಮೋದಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಶನಿವಾರ ಸಂಜೆ ಮಾಧ್ಯಮಗಳೊಂದಿಗೆ ಮುಖಾಮುಖಿಯಾದ ಅವರು, 4 ವರ್ಷಗಳ ಮೋದಿ ಆಡಳಿತ, ಯುಪಿಎ ಸರಕಾರದಂಥ ನಿಯಮ ಬಾಹಿರ ಆಡಳಿತವಾಗಿರಲಿಲ್ಲ ಎಂದ ಅವರು, ಮೋದಿಯವರದ್ದು, ನೀತಿ ನಿಯಮಾಧಾರಿತ ಸರ್ಕಾರ ಎಂದರು. 

2014ರ ಚುನಾವಣೆಗೂ ಮುನ್ನ ಮೋದಿ ನೀಡಿದ್ದ ಅಚ್ಛೇ ದಿನ್‌ ಭರವಸೆಗಳು ಬಹುತೇಕ ಈಡೇರಿವೆ. ಕೋಟ್ಯಂತರ ಜನರಿಗೆ ಮೋದಿ ಸುಗಮ ಆಡಳಿತದ ಪ್ರಯೋಜನ ಸಿಕ್ಕಿದೆ. ಕಡು ಬಡವರ ಮನೆಗೆ ಉಚಿತ ಎಲ್‌ಪಿಜಿ, ಸೂರು, ಸ್ವಾತಂತ್ರ್ಯ ಬಂದಾನಿಗಿನಿಂದ ಈವರೆಗೆ ಕತ್ತಲಲ್ಲೇ ಕಳೆದಿದ್ದ ಸಾವಿರಾರು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ, ಲಕ್ಷಾಂತರ ಹಳ್ಳಿಗಳಲ್ಲಿ ಶೌಚಾಲಯದ ಮೂಲಕ ನೈರ್ಮಲ್ಯ ಮುಂತಾದ ಸೌಕರ್ಯ ಕಲ್ಪಿಸಲಾಗಿದೆ. ಜತೆಗೆ, ಜನಧನ, ಮುದ್ರಾ ಯೋಜನೆಗಳ ಮೂಲಕವೂ ಕೋಟ್ಯಂತರ ಜನರಿಗೆ ನೆರವು ನೀಡಲಾಗಿದೆ ಎಂದು ಬಣ್ಣಿಸಿದರು. ಮತ್ತಷ್ಟು ಅಚ್ಛೇ ದಿನ್‌ಗಳು ಇನ್ನೊಂದು ವರ್ಷದಲ್ಲಿ ಸಾಕಾರಗೊಳ್ಳಲಿವೆ ಎಂದರು. 

ಆನಂತರ, ತಮ್ಮ ಮಾತುಗಳನ್ನು ವಿರೋಧ ಪಕ್ಷಗಳ ಕಡೆ ತಿರುಗಿಸಿದ ಶಾ, “”ಮೋದಿ ಹಠಾವೊ ಎಂಬ ಸಾಮಾನ್ಯ ಗುರಿಯೊಂದಿಗೆ ವಿಪಕ್ಷಗಳೆಲ್ಲಾ ಒಂದಾಗಿವೆ. ಆದರೆ, ಜನರ ಅಭಿಮಾನ ಮೋದಿ ಬೆನ್ನಿಗೆ ಹೆಬ್ಬಂಡೆಯಂತಿದೆ. ಜನಗಳ ಅಭಿಮಾನದ ಮುಂದೆ ವಿಪಕ್ಷಗಳ ತಂತ್ರಗಾರಿಕೆಗಳೆ ಲ್ಲವೂ ವಿಫ‌ಲವಾಗಲಿವೆ” ಎಂದರು.

ಆನಂತರ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಅವರು, “”ರಾಹುಲ್‌ ಗಾಂಧಿ ತಮ್ಮನ್ನು ತಾವು ಪ್ರಧಾನಿ ಅಭ್ಯರ್ಥಿ ಯೆಂದು ಪದೇ ಪದೆ ಹೇಳಿಕೊಳ್ಳುತ್ತಿದ್ದಾರೆ. ಅವರ ಅಭ್ಯರ್ಥಿತನಕ್ಕೆ ಇತರ ಪಕ್ಷಗಳ ಅಭಿಮತವೇ ನೆಂಬುದು ಒತ್ತಟ್ಟಿಗಿರಲಿ, ಅವರ ಸ್ವಂತ ಪಕ್ಷದಲ್ಲೇ ಅವರನ್ನು ಯಾರೂ ಬೆಂಬಲಿಸುತ್ತಿಲ್ಲ” ಎಂದು ಲೇವಡಿ ಮಾಡಿದರು. ಅಲ್ಲದೆ, ಪ್ರಧಾನಿ ಹುದ್ದೆಗೇರುವ ಅರ್ಹತೆ ಯಾರಿಗಿದೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ನುಡಿದರು. 

ವಿವಿಧ ರಾಜ್ಯಗಳಲ್ಲಿ ಎನ್‌ಡಿಎ ಮಿತ್ರ ಪಕ್ಷಗಳು ಬಿಜೆಪಿಗೆ ಸಡ್ಡು ಹೊಡೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, “ಕೆಲವು ಪಕ್ಷಗಳು ಮೈತ್ರಿ ಒಕ್ಕೂಟದಿಂದ ಹೋದರೂ, ನಷ್ಟವೇನಿಲ್ಲ. ಈಗಾಗಲೇ ಬಿಹಾರದ ಜೆಡಿಯು ಸೇರಿದಂತೆ 11 ಹೊಸ ಪಕ್ಷಗಳು ಎನ್‌ಡಿಎಗೆ ಸೇರಿಕೊಂಡಿವೆ ಎಂದರು. ಇದೇ ವೇಳೆ, ಕರ್ನಾಟಕ ಚುನಾವಣೆಯಲ್ಲಿ 104 ಸ್ಥಾನಗಳು ಬಿಜೆಪಿಗೆ ಲಭ್ಯ ವಾಗಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಬಲ ಹೆಚ್ಚಲು ಇದು ಶುಭ ಶಕುನ ಎಂದರು.
 
ನಿತೀಶ್‌ ಅಭಿನಂದನೆ: ಕೇಂದ್ರದಲ್ಲಿ ನಾಲ್ಕು ವರ್ಷಗಳ ಆಡಳಿತ ಪೂರೈಸಿದ್ದಕ್ಕೆ ಮೋದಿಯವರನ್ನು ಅಭಿನಂದಿಸಿ ರುವ ಬಿಹಾರ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌, “”ಈವರೆಗಿನ ಮೋದಿಯವರ ಆಡಳಿತ ಉತ್ತಮವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಆಡಳಿತವನ್ನು ನೀಡುತ್ತಾರೆಂಬ ಭರವಸೆಯಿದೆ” ಎಂದಿದ್ದಾರೆ.  

ನಂಬಿಕೆ ದ್ರೋಹಕ್ಕೆ ನಾಲ್ಕು ವರ್ಷ: ಕಾಂಗ್ರೆಸ್‌ 
ಅತ್ತ, ಬಿಜೆಪಿ, ಮೋದಿ ಸರಕಾರ 4 ವರ್ಷಗಳ ಸಾಧನೆಯನ್ನು ಹೆಮ್ಮೆಯಿಂದ ಆಚರಿಸುತ್ತಿದ್ದರೆ, ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳು ಇದನ್ನು “ನಂಬಿಕೆ ದ್ರೋಹ’ದ ನಾಲ್ಕನೇ ವರ್ಷಾಚರಣೆ ಎಂದು ಬಣ್ಣಿಸಿ, ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿವೆ. ದೇಶದ ನಾನಾ ರಾಜ್ಯಗಳಲ್ಲಿ ಈ ಕರಾಳ ದಿನಾಚರಣೆ ನಡೆಸಿದ ಕಾಂಗ್ರೆಸ್‌, ಮೋದಿ ಸರಕಾರದ ವೈಫ‌ಲ್ಯಗಳನ್ನು ಜನರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದೆ. 
ನವ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ, ಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್‌, ಅಶೋಕ್‌ ಗೆಹೊಟ್‌, ರಣದೀಪ್‌ ಸುಜೇìವಾಲ ಮುಂತಾದವರು ಭಾಗವಹಿಸಿದ್ದರು. 

“”ದೇಶಕ್ಕೆ ಮೋದಿ-ಅಮಿತ್‌ ಶಾ ಹೇಗೆ ಮಾರಕ ಎಂಬುದು ಜನರಿಗೆ ಮನವರಿಕೆಯಾಗಿದೆ” ಎಂದು ಸುಜೇìವಾಲ ಹೇಳಿದರೆ, “”ಮೋದಿ ಆಡಳಿತದಲ್ಲಿ ಯಾರೂ ಸುರಕ್ಷಿತವಾಗಿಲ್ಲ” ಎಂದು ಗುಲಾಂ ನಬಿ ಆರೋಪಿಸಿದರು. ರಾಜಸ್ಥಾನದಲ್ಲಿ ಮಾತನಾಡಿದ ಕಾಂಗ್ರೆಸ್‌ ಮಹಾ ಕಾರ್ಯದರ್ಶಿ ಅವಿನಾಶ್‌ ಪಾಂಡೆ, 2014ಕ್ಕೂ ಮೊದಲು 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಮೋದಿ, 4 ವರ್ಷಗಳಲ್ಲಿ ಕೇವಲ 2.4 ಲಕ್ಷ ಉದ್ಯೋಗ ಸೃಷ್ಟಿಸಿದೆ. ಮೋದಿ ಆಡಳಿತದಲ್ಲಿ ಮಹಿಳೆಯರು, ರೈತರು, ದಲಿತರು, ಬುಡಕಟ್ಟು ಜನಾಂಗಗಳು ಅಸುರಕ್ಷಿತರಾಗಿದ್ದಾರೆ ಎಂದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, “”ಜನರಿಗೆ ಫಿಟೆ°ಸ್‌ ಸವಾಲು ಹಾಕುವ ಬದಲು ತೈಲ ಬೆಲೆಗಳನ್ನು ಇಳಿಸುವ ಬಗ್ಗೆ ಕಾಂಗ್ರೆಸ್‌ ಎಸೆದಿರುವ ಸವಾಲನ್ನು ಸ್ವೀಕರಿಸಿ” ಎಂದು ಮೋದಿ ಕಾಲೆಳೆದರು. 

ನಿರಾಶಾದಾಯಕ: ಮಾಯಾವತಿ
ಲಕ್ನೋದಲ್ಲಿ ಮಾತನಾಡಿದ ಬಿಎಸ್‌ಪಿ ನಾಯಕಿ ಮಾಯಾವತಿ, “”4 ವರ್ಷಗಳ ಮೋದಿ ಆಡಳಿತ ನಿರಾಶಾದಾಯಕವಾಗಿದೆ. ಬಡವರನ್ನು, ಕೂಲಿಗಳ‌ನ್ನು, ಮಹಿಳೆಯರನ್ನು ಈ ಪರಿಯಾಗಿ ಶೋಷಣೆ ಮಾಡಿದ ಕೇಂದ್ರ ಸರ್ಕಾರ ಮತ್ತೂಂದಿಲ್ಲ. ಇದನ್ನು ಮನಗಂಡೇ ಎನ್‌ಡಿಎ ಒಕ್ಕೂಟದಿಂದ ಅನೇಕ ಪಕ್ಷಗಳು ಹೊರ ನಡೆಯುತ್ತಿವೆ” ಎಂದರು. ಉತ್ತರ ಪ್ರದೇಶದ ಮತ್ತೂಬ್ಬ ಮಾಜಿ ಸಿಎಂ, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌, “ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಬ್ಯಾಂಕುಗಳಿಗೆ ಟೋಪಿ ಹಾಕಿರುವ ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ನಿಜಾರ್ಥದಲ್ಲಿ ಡಾಲರ್‌ ವಿರುದ್ಧ ರೂಪಾಯಿ ಕುಸಿದಿದೆ, ತೈಲ ಬೆಲೆ ಗಗನಕ್ಕೇರಿದೆ’ ಎಂದಿದ್ದಾರೆ.  

ಕೇಂದ್ರದ ವಿರುದ್ಧ ನಿರ್ಣಯ
ವಿಜಯವಾಡದಲ್ಲಿ ಭಾನುವಾರದಿಂದ ಆರಂಭವಾಗಲಿರುವ ಆಡಳಿತಾರೂಢ ಟಿಡಿಪಿ “ಮಹಾ ನಾಡು’ ಹೆಸರಿನ 3 ದಿನಗಳ ವಾರ್ಷಿಕ ಸಮ್ಮೇಳನದಲ್ಲಿ ಕೇಂದ್ರ ಸರಕಾರದ ವಿರುದ್ಧ ನಂಬಿಕೆ ದ್ರೋಹಿ ಸರಕಾರವೆಂಬ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ವಿವೇಚನೆಯಿಲ್ಲದೆ ಜಿಎಸ್‌ಟಿ, ಅಪನಗದೀಕರಣದಂಥ ನಿರ್ಧಾರಗಳನ್ನು ಕೈಗೊಂಡು ಜನರ ನಂಬಿಕೆ ಕಳೆ ದು ಕೊಂಡಿದೆ ಎಂದು ಟಿಡಿಪಿ ಹೇಳಿದೆ. 

ಪ್ರಶ್ನೆಗಳನ್ನು ಮುಂದಿಟ್ಟ ಚಾಂಡಿ
ಟ್ವಿಟರ್‌ನಲ್ಲಿ ಪ್ರಶ್ನೆಗಳನ್ನು ಮೋದಿ ಮುಂದಿಟ್ಟಿರುವ ಕೇರಳದ ಮಾಜಿ ಸಿಎಂ ಉಮನ್‌ ಚಾಂಡಿ, ಸ್ವಚ್ಛ ಭಾರತ ಅಭಿಯಾನದ ಸ್ಥಿತಿಗತಿ ಹೇಗಿವೆ, ವಾರಣಾಸಿಯೇಕೆ 2ನೇ ಪ್ರದೂಷಿತ ನಗರ ಎಂದು ಕರೆಯಲ್ಪಟ್ಟಿದೆ, ಮೇಕ್‌ ಇನ್‌ ಇಂಡಿಯಾದಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿವೆ, ಆಧಾರ್‌ ಮಾಹಿತಿ ಏಕೆ ರಹಸ್ಯವಾಗಿ ಉಳಿಯಲಿಲ್ಲ ಎಂದು ಕೇಳಿದ್ದಾರೆ. 

ಮಾತುಕತೆ ಮೂಲಕ ರಾಮಮಂದಿರ ಸಾಧ್ಯ
ಪ್ರತಿ ಮಹಾ ಚುನಾವಣೆಗೆ ಸಿದ್ಧವಾಗುವಾಗಲೂ ಬಿಜೆಪಿ ಎದುರು ಬರುವ ರಾಮಮಂದಿರ ಪ್ರಶ್ನೆ, ಶನಿವಾರದ ಸುದ್ದಿ ಗೋಷ್ಠಿಯಲ್ಲೂ ಮತ್ತೆ ತೇಲಿ ಬಂದಾಗ, ಈ ಸಮಸ್ಯೆ ನ್ಯಾಯಾಲಯದ ಮೂಲಕ ಅಥವಾ ಮಾತುಕತೆಯ ಮೂಲಕ ಬಗೆ ಹರಿಯಬೇಕಿದೆ. ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣ ನಮ್ಮ (ಬಿಜೆಪಿ) ಕೈಯ್ಯಲ್ಲಿಲ್ಲ ಎಂದರು.  

ನಾಲ್ಕು ವರ್ಷಗಳ ಮೋದಿ  ಆಡಳಿತ ಗರಿಷ್ಠ ಪ್ರಚಾರ, ಕಡಿಮೆ ಸಾಧನೆ. 
ತೇಜಸ್ವಿ ಯಾದವ್‌,  ಬಿಹಾರ ವಿಪಕ್ಷ ನಾಯಕ

ಸಿಂಗಾಪುರದಲ್ಲಿ ಗಾಂಧಿ ಫ‌ಲಕ ಅನಾವರಣ
ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ 3 ದಿನಗಳ ಸಿಂಗಾಪುರ ಪ್ರವಾಸಕ್ಕೆ ತೆರಳಲಿದ್ದಾರೆ. ಈ ವೇಳೆ ಅವರು ಮಹಾತ್ಮ ಗಾಂಧಿ ಚಿತಾಭಸ್ಮವನ್ನು ಸಿಂಗಾಪುರ ನೀರಿನಲ್ಲಿ ವಿಲೀನ ಮಾಡಿದ್ದರ ಸ್ಮರಣಾರ್ಥವಾಗಿ ಫ‌ಲಕವೊಂದನ್ನು ಉದ್ಘಾಟಿಸಲಿದ್ದಾರೆ. 1948 ರಲ್ಲಿ ಗಾಂಧಿ ಚಿತಾಭಸ್ಮವನ್ನು ಸಿಂಗಾಪುರವೂ ಸೇರಿದಂತೆ ಪ್ರಪಂಚದ ನಾನಾ ಭಾಗಗಳಿಗೆ ಕಳು ಹಿಸಲಾಗಿತ್ತು. ಅದರ ಸ್ಮರಣಾರ್ಥ ಕ್ಲಿಫೋರ್ಡ್‌ ಪಿಯೆರ್‌ನಲ್ಲಿ ಜೂ.2ರಂದು ಪ್ರಧಾನಿ ಮೋದಿ ಅವರು ಫ‌ಲಕ ಅನಾವರಣ ಮಾಡಲಿದ್ದಾರೆ. ಜೊತೆಗೆ ಇಲ್ಲಿಯ 3 ಭಾರತೀಯ ದೇವಸ್ಥಾನಗಳಿಗೂ ಭೇಟಿ ನೀಡಲಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.