CONNECT WITH US  

2021ಕ್ಕೆ ಬರುತ್ತಿದೆ ಮಾರುತಿ ವಿದ್ಯುತ್‌ ಕಾರು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ವಿದ್ಯುತ್‌ ಕಾರು ಉತ್ಪಾದನೆ ಬಗ್ಗೆ ದೇಶದಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಮಾರುತಿ ಸುಜುಕಿ 2020-2021ನೇ ವಿತ್ತೀಯ ವರ್ಷದಿಂದ ವಿದ್ಯುತ್‌ ಕಾರುಗಳ ಉತ್ಪಾದನೆಗೆ ತೊಡಗಲಿದೆ. ಇತರ ಕಾರು ಉತ್ಪಾದಕ ಸಂಸ್ಥೆಗಳಾಗಿರುವ ಟಾಟಾ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಈ ನಿಟ್ಟಿನಲ್ಲಿ ಆರಂಭ ಮಾಡಿದ್ದರೂ, ಮಾರುತಿ ಸುಜುಕಿಯೇ ಮೊದಲು ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಮಾರುತಿ ಯೋಜನೆಗಳೇನು?
ಚಾರ್ಜ್‌ಗಾಗಿ ಬಳಕೆ ಮಾಡುವ ಲೀಥಿಯಂ- ಇಯಾನ್‌ ಬ್ಯಾಟರಿ ಉತ್ಪಾದಿಸುವ ಕಾರ್ಖಾನೆಯನ್ನು ಮೊದಲು ಆರಂಭಿಸಲು ಚಿಂತನೆ. ಬಳಿಕವೇ ಕಾರು ಉತ್ಪಾದನೆ ಮಾಡಲು ಕಂಪೆನಿಯ ಇರಾದೆ. ಸ್ಥಳೀಯವಾಗಿಯೇ ಉತ್ಪಾದಿಸಲಾಗುವ ಬ್ಯಾಟರಿಯನ್ನೇ ಹೊಂದಿರುವ ಮೊದಲ ವಿದ್ಯುತ್‌ ಕಾರುಗಳು ಎಂಬ ಹೆಗ್ಗಳಿಕೆಗೆ ಮಾರುತಿ ಸುಜುಕಿ ಪಾತ್ರವಾಗಲಿದೆ.

ಉಳಿದ ಕಂಪೆನಿಗಳು
ಕಾರುಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದ್ದರೂ ಬ್ಯಾಟರಿ ಮತ್ತು ಇತರ ವಸ್ತುಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕು.

ಹಿನ್ನೋಟ
- 2018 ಮೇ- 14.5 ಬಿಲಿಯನ್‌ ಡಾಲರ್‌ ಮೊತ್ತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೂಡಿಕೆಯ ಘೋಷಣೆ
2018 ಫೆಬ್ರವರಿ- 2020ರ ಒಳಗಾಗಿ ಭಾರತದಲ್ಲಿ ವಿದ್ಯುತ್‌ ಕಾರು ಉತ್ಪಾದಿಸುವ ಪ್ರಕಟನೆ
- 2017 ಡಿಸೆಂಬರ್‌- ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪಿಸುವ ಬಗ್ಗೆ ಇಂಗಿತ
- 2017 ನವೆಂಬರ್‌- ಟೊಯೋಟಾ, ಸುಜುಕಿ ತಾತ್ವಿಕವಾಗಿ ವಿದ್ಯುತ್‌ ಕಾರು ಉತ್ಪಾದನೆಗೆ ಸಹಮತ

ತಂತ್ರಜ್ಞಾನ
- ಮಾರುತಿ ಸುಜುಕಿ ತಂತ್ರಜ್ಞಾನಕ್ಕಾಗಿ ಟೊಯೋಟ ಮೋಟರ್ಸ್‌ 
- ಕಾರ್ಪೊರೇಷನ್‌ ಮತ್ತು ಡೆನ್ಸೋ ಕಾರ್ಪೊರೇಷನ್‌ ಜತೆಗೆ ಒಪ್ಪಂದ
- ಇವೆರಡು ಕಂಪೆನಿಗಳ ಜತೆಗೆ ಗುಜರಾತ್‌ನಲ್ಲಿ  ಲೀಥಿಯಂ- ಇಯಾನ್‌ ಬ್ಯಾಟರಿ ಉತ್ಪಾದಿಸುವ ಬಗ್ಗೆ ಸಹಭಾಗಿತ್ವ

ದೇಶದಲ್ಲಿ ವಿದ್ಯುತ್‌ ಕಾರುಗಳ ಸ್ಥಿತಿ-ಗತಿ
- ಭಾರತದಲ್ಲಿ ಇನ್ನೂ ಈ ಕ್ಷೇತ್ರ ಬೆಳವಣಿಗೆ ಹಂತದಲ್ಲಿದೆ.
- 25,000- 2016-17ನೇ ಸಾಲಿನಲ್ಲಿ ಮಾರಾಟವಾದ ಕಾರುಗಳು
- ಈ ಪೈಕಿ ಶೇ.92 ದ್ವಿಚಕ್ರ ವಾಹನಗಳು, ಕಾರುಗಳು, 
- 60,000 ಕಾರುಗಳು- 2020ರಿಂದ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪೆನಿಯ ವಾರ್ಷಿಕ ಉತ್ಪಾದನೆ ಗುರಿ
- 30,000-35,000 ಕಾರುಗಳು- ಮಾರುತಿ ಸುಜುಕಿ ಇಂಡಿಯಾದ ಉತ್ಪಾದನೆಯ ಗುರಿ

Trending videos

Back to Top