CONNECT WITH US  

12 ದಿನಗಳಲ್ಲಿ ಪೆಟ್ರೋಲ್‌ ದರ 1.65 ಇಳಿಕೆ 

ನವದೆಹಲಿ: ಏರುಗತಿಯಲ್ಲಿದ್ದ ಪೆಟ್ರೋಲ್‌,ಡೀಸೆಲ್‌ ಬೆಲೆ ಕಳೆದ 12 ದಿನಗಳಿಂದ ಇಳಿಯುತ್ತಿದ್ದು ವಾಹನ ಸವಾರರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.

ಸತತ 12ನೇ ದಿನವೂ ತೈಲ ದರದಲ್ಲಿ ಇಳಿಕೆಯಾಗಿದ್ದು, ಭಾನುವಾರ ಪೆಟ್ರೋಲ್‌ ದರ ಲೀ.ಗೆ 24 ಪೈಸೆ ಮತ್ತು
ಡೀಸೆಲ್‌ ದರ ಲೀ.ಗೆ 18 ಪೈಸೆ ಇಳಿಕೆಯಾಗಿದೆ. ಈ ಮೂಲಕ ಕಳೆದ 12 ದಿನಗಳಲ್ಲಿ ಒಟ್ಟಾರೆಯಾಗಿ ಪೆಟ್ರೋಲ್‌ ದರ 1.65 ರೂ. ಮತ್ತು ಡೀಸೆಲ್‌ ದರ 1.21 ರೂ. ಇಳಿಕೆಯಾಗಿದೆ.

ಕರ್ನಾಟಕ ಚುನಾವಣೆಯ ನಂತರ ಏರಿಕೆಯ ಹಾದಿಯಲ್ಲಿ ಸಾಗಿದ್ದ ತೈಲ ದರ ಗ್ರಾಹಕರ ನಿದ್ದೆಗೆಡಿಸಿತ್ತು. ಸತತ 16
ದಿನಗಳ ಕಾಲ ಏರುಗತಿಯಲ್ಲಿದ್ದ ಪೆಟ್ರೋಲ್‌ ದರ ಲೀ.ಗೆ 4 ರೂ. ಹಾಗೂ ಡೀಸೆಲ್‌ ದರ 3.3 ರೂ.ನಷ್ಟು ಒಟ್ಟಾರೆ ಏರಿಕೆ ಕಂಡಿತ್ತು. ಮೇ 29ರ ನಂತರ ಪ್ರತಿದಿನವೂ ತೈಲ ದರದಲ್ಲಿ ಇಳಿಕೆಯಾಗುತ್ತಿದೆ.


Trending videos

Back to Top