CONNECT WITH US  

ದಲ್ಲಾಳಿಗಳ ಕಾಟಕ್ಕೆ ಡಿಜಿಟಲ್‌ ಇಂಡಿಯಾ ಮುಕ್ತಿ

ಯಾರು ಒಪ್ಪುತ್ತಾರೋ ಗೊತ್ತಿಲ್ಲ, ಭಾರತ ಬದಲಾಗಿದೆ: ಪಿಎಂ ಮೋದಿ

ಹೊಸದಿಲ್ಲಿ: ಡಿಜಿಟಲ್‌ ಇಂಡಿಯಾದಿಂದ ದೇಶದಲ್ಲಿ ದಲ್ಲಾಳಿ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಸಣ್ಣಪುಟ್ಟ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯೋಗಗಳನ್ನೂ ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿಜಿಟಲ್‌ ಇಂಡಿಯಾದ ಫ‌ಲಾನುಭವಿಗಳ ಜತೆ ಶುಕ್ರವಾರ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಸಂವಾದ ನಡೆಸಿದ ಅವರು, ಕಪ್ಪುಹಣ ಮತ್ತು ಕಾಳಸಂತೆ ಮಾರುಕಟ್ಟೆ ಹಾವಳಿಯನ್ನೂ ನಿಯಂತ್ರಣಕ್ಕೆ ತಂದಿದೆ ಎಂದಿದ್ದಾರೆ. ಇದರ ಜತೆಗೆ ಕೇಂದ್ರ ಸರಕಾರದ ರುಪೇ ಕಾರ್ಡ್‌ ಬಳಕೆ ಬಗ್ಗೆ ಒತ್ತಿ ಹೇಳಿರುವ ಅವರು, ಇದರ ಜತೆಗೆ ರಾಷ್ಟ್ರೀಯತೆಯನ್ನೂ ಥಳಕು ಹಾಕಿದ್ದಾರೆ. ವಿದೇಶಿ ಕಂಪನಿಗಳ ಕ್ರೆಡಿಟ್‌ ಕಾರ್ಡ್‌ಗಳಿಗಿಂತ ಇದು ಉತ್ತಮವಾಗಿದ್ದು, ಇಲ್ಲಿ ಯಾವುದೇ ಪ್ರಕ್ರಿಯಾ ಶುಲ್ಕ ಇರುವುದಿಲ್ಲವೆಂದೂ ಹೇಳಿದ್ದಾರೆ.

ಡಿಜಿಟಲ್‌ ಇಂಡಿಯಾದಿಂದಾಗಿ ಎರಡು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಸಣ್ಣಪುಟ್ಟ ನಗರಗಳಲ್ಲೂ 550 ಕೋಟಿ ವೆಚ್ಚದಲ್ಲಿ ಬಿಪಿಒ ಕೇಂದ್ರ ಸೃಷ್ಟಿಸಲಾಗಿದೆ. 2014ರಲ್ಲಿ ಕೇವಲ 2 ಇದ್ದ ಮೊಬೈಲ್‌ ತಯಾರಕ ಮತ್ತು ಬಿಡಿಭಾಗಗಳ ತಯಾರಿಕಾ ಘಟಕಗಳ ಸಂಖ್ಯೆ ಇದೀಗ 120ಕ್ಕೆ ಏರಿಕೆಯಾಗಿದೆ. ಈ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 4.5 ಲಕ್ಷ ಉದ್ಯೋಗಗಳು ಸೃ ಯಾಗಿವೆ ಎಂದರು. ಇದೇ ಸಂದರ್ಭದಲ್ಲಿ ಭೀಮ್‌ ಆ್ಯಪ್‌ ನ ಬಳಕೆ ಹೆಚ್ಚಾಗಿರುವ ಕುರಿತಂತೆಯೂ ಮಾತನಾಡಿದರು. ಇದೇ ವೇಳೆ ಜು.20ರಂದು ಪ್ರಧಾನಿ ರೈತರ ಜತೆಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ. 


Trending videos

Back to Top