CONNECT WITH US  

ಸಲ್ಲು ವಿರುದ್ಧ ಯುಎಸ್‌ ಸಂಸ್ಥೆ ದೂರು

ವಾಷಿಂಗ್ಟನ್‌: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಇತರ ಐವರು ನಟರ ವಿರುದ್ಧ ಅಮೆರಿಕದ ವೈಬ್ರಂಟ್‌ ಮೀಡಿಯಾ ಗ್ರೂಪ್‌ ಸಂಸ್ಥೆ ಒಪ್ಪಂದ ಉಲ್ಲಂಘನೆ ದೂರು ನೀಡಿದೆ. ಅಮೆರಿಕದಲ್ಲಿ ಕಾರ್ಯಕ್ರಮ ನಡೆಸಿಕೊಡಲು ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಸಂಸ್ಥೆ ದೂರಿದೆ.

ಸಲ್ಮಾನ್‌ ಜೊತೆಗೆ ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ರಣವೀರ್‌ ಸಿಂಗ್‌ ಹಾಗೂ ಪ್ರಭುದೇವ, ಮ್ಯಾಟ್ರಿಕ್ಸ್‌ ಇಂಡಿಯಾ ಎಂಟರ್‌ಟೇನ್‌ಮೆಂಟ್‌ ಕನ್ಸಲ್ಟಂಟ್ಸ್‌ ಹಾಗೂ ಯಶ್‌ ರಾಜ್‌ ಫಿಲಂಸ್‌ ವಿರುದ್ಧ ದೂರು ನೀಡಲಾಗಿದೆ. ಉಂಟಾಗಿರುವ ಹಾನಿಗೆ 6.5 ಕೋಟಿ ರೂ. ಪರಿಹಾರ ಪಾವತಿ ಮಾಡುವಂತೆ ದೂರಿನಲ್ಲಿ ತಿಳಿಸಲಾಗಿದೆ. 2013ರಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು.


Trending videos

Back to Top